ಬೆಂಗಳೂರು : ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಅವಾರಂತರ ಸೃಷ್ಟಿಯಾಗಿದೆ.
BIG NEWS: ‘ರೀಲ್ಸ್’ ಮಾಡೋವಾಗ ರೈಲ್ವೆ ಹಳಿ ಬಳಿ ಹುಡುಗರ ಹುಚ್ಚಾಟ: ಇಲ್ಲಿದೆ ಶಾಕಿಂಗ್ ವಿಡಿಯೋ
ನಗರದ ವಿವಿಧೆಡೆ ದಾಖಲೆಯ ಮಳೆಯಾಗಿದ್ದು, ಬೆಳ್ಳಂದೂರಿನ ಎಕೋಸ್ಪೇಸ್ ಬಳಿ ಮತ್ತೆ ನೀರು ತುಂಬಿಕೊಂಡಿದೆ. ನಗರದ ವಿವಿಧೆಡೆ ರಸ್ತೆ, ಅಂಡರ್ ಪಾಸ್ ಹಾಗೂ ಮೇಲ್ಸೇತುವೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ತಾವರೆಕೆರ ಚೋಳನಾಯನಹಳ್ಳಿಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಚೋಳನಾಯಕನಹಳ್ಳಿಯಲ್ಲಿ 15.5 ಮಿ.ಮೀ ಮಳೆ ದಾಖಲಾಗಿದೆ. ಸೊಂಡೆಕೊಪ್ಪ 79.5 ಮಿ.ಮೀ,ಹುಸ್ಕೂರು 70 ಮಿ.ಮೀ, ದಾಸಾನಪುರದಲ್ಲಿ 65.5 ಮಿ.ಮೀ ಮಳೆಯಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ಶೀಘ್ರವೇ ‘900 ಪಿಎಸ್ಐ ನೇಮಕಾತಿ’ಗೆ ಅರ್ಜಿ ಆಹ್ವಾನ
ನಗರದ ಕಸ್ತೂರಿ ಬಾ ರಸ್ತೆ, ರಿಚ್ ಮಂಡ್ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದವು. ತುಮಕೂರು ರಸ್ತೆ, ಮಲ್ಲೇಶ್ವರ ರಸ್ತೆ, ಎಂ.ಜಿ ರಸ್ತೆ,ಡಬ್ಬಲ್ ರೋಡ್, ಆನಂದ್ ರಾವ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅಂಡರ್ ಪಾಸ್ ನಲ್ಲಿ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ದೇವರಜೀವನಹಳ್ಳಿ, ಆರ್ ಟಿ ನಗರ, ಕೋರಮಂಗಲ ಸೇರಿದಮತೆ ನಗರದ ವಿವಿಧ ಕಡೆ 10 ಕ್ಕೂ ಹೆಚ್ಚು ಅಧಿಕ ಮರಗಳು ಉರುಳಿ ಬಿದ್ದಿವೆ.
ರಾಜಮಹಲ್ ಗುಟ್ಟಹಳ್ಳಿ 8 ಸೆಂ.ಮೀ, ಬಾಣಸವಾಡಿ ಮತ್ತು ವಿದ್ಯಾಪೀಠ 7.2 ಸಂಪಂಗಿರಾಮನಗರ6.8, ಬೆಳ್ಳಂದೂರು 6.7 ಸೆಂ.ಮೀ , ಹಂಪಿನಗರ 4.4 ಸೆ.ಮೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.