ಬೆಂಗಳೂರು : ಐಟಿ ಬಿಟಿ ಕಂಪನಿಗಳಿಂದ ಸರ್ಕಾರಕ್ಕೆ ಪತ್ರ ನೀಡಿದ ಬೆನ್ನಲ್ಲೇ ರಾಜ್ಯದ ಸಿಎಂ ಬೊಮ್ಮಾಯಿ ʼಐಟಿ – ಬಿಟಿ ಕಂಪನಿ ಪ್ರಮುಖರನ್ನು ಕರೆದು ಚರ್ಚಿಸ್ತೇವೆʼ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ
BREAKING NEWS : ಮುರುಘಾ ಶ್ರೀಗಳ ಬೆಳ್ಳಂಬೆಳಗ್ಗೆ ಆರೋಗ್ಯ ತಪಾಸಣೆ : ಇಂದೂ ಮುಂದುವರೆಯಲಿದೆ ಶ್ರೀಗಳ ವಿಚಾರಣೆ
ಭಾರೀ ಮಳೆಯ ಆರ್ಭಟಕ್ಕೆ ಸಿಲಿಕಾನ್ ಸಿಟಿಯಲ್ಲಿ ಅವಾಂತರ ಸೃಷ್ಠಿಯಾಗಿತ್ತು. ಈ ಸಮಸ್ಯೆಯಿಂದ ಬೇಸತ್ತು ಐಟಿ ಬಿಟಿ ಕಂಪನಿಗಳಿಂದ ಸರ್ಕಾರಕ್ಕೆ ಪತ್ರ ನೀಡಲಾಗಿತ್ತು. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಬೊಮ್ಮಾಯಿ ಮಾತನಾಡಿ ಐಟಿ-ಬಿಟಿ ಪ್ರಮುಖರನ್ನು ಕರೆದು ಸಭೆ ನಡೆಸಿ ಚರ್ಚೆ ನಡೆಸಲಾಗುತ್ತದೆ. ಎಲ್ಲರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ
BREAKING NEWS : ಮುರುಘಾ ಶ್ರೀಗಳ ಬೆಳ್ಳಂಬೆಳಗ್ಗೆ ಆರೋಗ್ಯ ತಪಾಸಣೆ : ಇಂದೂ ಮುಂದುವರೆಯಲಿದೆ ಶ್ರೀಗಳ ವಿಚಾರಣೆ
ಕಳೆದ ವಾರ ಸುರಿದ ಮಳೆಯಿಂದ `ಬ್ರ್ಯಾಂಡ್ ಬೆಂಗಳೂರು’ ಹೆಸರು ಸಹ ನೀರಿನಲ್ಲಿ ಕೊಚ್ಚಿ ಹೋಗ್ತಿದೆ. ಐಟಿ-ಬಿಟಿ ಸಿಟಿ ಎಂದೇ ಹೆಸರಾದ ಬೆಂಗಳೂರಿಗೆ ಐಟಿ ಕಂಪನಿಗಳು ವಲಸೆ ಎಚ್ಚರಿಕೆ ನೀಡಿ ಶಾಕ್ ಕೊಟ್ಟಿತ್ತು
BREAKING NEWS : ಮುರುಘಾ ಶ್ರೀಗಳ ಬೆಳ್ಳಂಬೆಳಗ್ಗೆ ಆರೋಗ್ಯ ತಪಾಸಣೆ : ಇಂದೂ ಮುಂದುವರೆಯಲಿದೆ ಶ್ರೀಗಳ ವಿಚಾರಣೆ
ಈ ಬೆನ್ನಲ್ಲೆ ಬೆಂಗಳೂರು ಅಂದ್ರೆ ಐಟಿ-ಬಿಟಿ ಹಬ್ ಎಂದೇ ಖ್ಯಾತಿ. ಆದರೀಗ ಒಂದು ದಿನದ ಮಳೆಗೆ ಬ್ರ್ಯಾಂಡ್ ಬೆಂಗಳೂರು ಹೆಸರೇ ಬರ್ಬಾದ್ ಆಗ್ತಿದ್ದು, ಬೆಂಗಳೂರಿನಿಂದ ಐಟಿ ಕಂಪನಿಗಳು ವಲಸೆ ಹೋಗುವ ಎಚ್ಚರಿಕೆ ನೀಡಿವೆ. ಹೊರವರ್ತುಲ ರಸ್ತೆ ಕಂಪನಿಗಳ ಅಸೋಸಿಯೇಷನ್ ಖುದ್ದು ಈ ಬಗ್ಗೆ ಸಿಎಂಗೆ ಪತ್ರ ಬರೆದಿದೆ
ಕಳೆದ ವಾರ ಸತತ ಮರ್ನಾಲ್ಕು ದಿನ ಸುರಿದ ಮಹಾಮಳೆಗೆ ಐಟಿ ಕಂಪನಿಗಳು ಭಾರೀ ನಷ್ಟ ಅನುಭವಿಸಿವೆ. ಅದ್ರಲ್ಲೂ ಆಗಸ್ಟ್ 30 ರಂದು ಸುರಿದ ಮಳೆಯಿಂದಾಗಿ 5 ಗಂಟೆ ಹೊರವರ್ತುಲದ ರಸ್ತೆಯಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ರು. ಐಟಿ ಕಂಪನಿಗಳ ಒಳಭಾಗಕ್ಕೆಲ್ಲಾ ನೀರು ನುಗ್ಗಿತ್ತು. ಇವೆಲ್ಲದರ ಪರಿಣಾಮ 255 ಕೋಟಿ ರೂ ನಷ್ಟವಾಗಿದೆ. ಈ ಹೊರವರ್ತುಲ ರಸ್ತೆಯ ಕಳಪೆ ಕಾಮಗಾರಿ ನಿರ್ವಹಣೆ ಮೂಲ ಸೌಕರ್ಯಗಳ ಕೊರತೆ, ಮಳೆ ಬಂದಾಗ ಆಗುವ ಅವಾಂತರದಿಂದ ಕಂಪನಿಗಳಿಗೆ ಭಾರೀ ನಷ್ಟವಾಗಿದೆ.
ಈ ಬಗ್ಗೆ ಮಾತನಾಡಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಐಟಿ ಕಂಪನಿಯವರು ಪದೇ-ಪದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
BREAKING NEWS : ಮುರುಘಾ ಶ್ರೀಗಳ ಬೆಳ್ಳಂಬೆಳಗ್ಗೆ ಆರೋಗ್ಯ ತಪಾಸಣೆ : ಇಂದೂ ಮುಂದುವರೆಯಲಿದೆ ಶ್ರೀಗಳ ವಿಚಾರಣೆ
ಸರ್ಕಾರಕ್ಕೆ ಬಹುದೊಡ್ಡ ಆದಾಯ ತರುವ ವಲಯವನ್ನ ನಿರ್ಲಕ್ಷ್ಯ ಮಾಡೋದು ಸರಿಯಲ್ಲ. ನಿಮ್ಮ ದುರಾಸೆ ಸಾಕು. ಕಳಪೆ ಕಾಮಗಾರಿಯಿಂದ ಬೆಂಗಳೂರಿಗೆ ಸಾಕಾಗಿದೆ ಅಂತಾ ಅಸಮಾಧಾನ ಹೊರಹಾಕಿದ್ದಾರೆ. ಐಟಿ ಉದ್ಯೋಗಿಗಳು ಕೂಡ ಸರ್ಕಾರದ ಆಕ್ರೋಶ ಹೊರಹಾಕಿದ್ದಾರೆ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇವುಗಳನ್ನು ತಿಳಿದು ರಾಜ್ಯ ಮುಖ್ಯಮಂತ್ರಿ ಬೊಮ್ಮಾಯಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ