ಅಫ್ಘಾನಿಸ್ತಾನ: ಶಾಲೆಯಲ್ಲಿ ಸ್ಫೋಟಗೊಳ್ಳದ ಶೆಲ್ನೊಂದಿಗೆ ಆಟವಾಡ್ತಿದ್ದ 4 ಮಕ್ಕಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಶನಿವಾರ ದಕ್ಷಿಣ ಅಫ್ಘಾನಿಸ್ತಾನದಲ್ಲಿ ನಡೆದಿದೆ.
ಹೆಲ್ಮಂಡ್ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದ್ದು, ಮಕ್ಕಳು ಸ್ಫೋಟಗೊಳ್ಳದ ಶೆಲ್ ಅನ್ನು ತಮ್ಮ ಧಾರ್ಮಿಕ ಶಾಲೆಯೊಳಗೆ ತಂದು ಅದರೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಅವು ದಿಢೀರ್ ಸ್ಫೋಟಗೊಂಡು ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಇವರು 7 ರಿಂದ 14 ವರ್ಷದವರಾಗಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥರ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.
ಅಫ್ಘಾನಿಸ್ತಾನವು ದಶಕಗಳ ಯುದ್ಧದಿಂದ ಬಳಲುತ್ತಿದೆ. ಅವುಗಳು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ಮಕ್ಕಳು ತಮ್ಮ ಕುಟುಂಬಗಳಿಗೆ ಸಹಾಯ ಮಾಡಲು ಸ್ಕ್ರ್ಯಾಪ್ ಲೋಹವನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ಹಲವು ಬಾರಿ ಇದೇ ರೀತಿ ಸ್ಫೋಟಗೊಳ್ಳದ ಶೆಲ್ ಮುಟ್ಟಿ ಕೆಲವರು ಸಾವನ್ನಪ್ಪಿದ್ದಾರೆ ಹಾಗೂ ಸ್ಫೋಟದಿಂದ ಕೆಲವರು ಅಂಗವಿಕಲರಾಗಿದ್ದಾರೆ.
BIGG NEWS: ಗಣೇಶ ವಿಸರ್ಜನೆಗೆ ಸಿಲಿಕಾನ್ ಸಿಟಿಯಲ್ಲಿ ಹೈಅಲರ್ಟ್ : ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ
BIGG NEWS : ಪೋಷಕರೊಬ್ಬರು ತಮ್ಮ ಮಗಳು ಕಾಣುತ್ತಿಲ್ಲ ಎಂದು ಮುರುಘಾಮಠಕ್ಕೆ ಬಂದಿದ್ದ ಘಟನೆಗೆ ಬಿಗ್ ಟ್ವಿಸ್ಟ್