ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ವೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ಶನಿವಾರ ಘರ್ಷಣೆ ನಡೆದಿದ್ದು ಜಾಗೃತಿಗಾಗಿ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಪಥಸಂಚಲನ ನಡೆಯಿತು.
ಪಥಸಂಚಲನವು ಪ್ರವಾಸಿ ಮಂದಿರದಿಂದ ಹೊರಟು, ಗುಂಡ್ಲುಪೇಟೆ ವೃತ್ತ, ಮೇಲಗಡೆ ನಾಯಕರ ಬೀದಿ ನಾಗಪ್ಪಶೆಟ್ಟರ ಚೌಕದ ಮೂಲಕ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಮರಳ್ಳಿ ವೃತ್ತ, ಭುವನೇಶ್ವರಿ ವೃತ್ತ, ರಥದ ಬೀದಿ, ಖಡಕ್ ಮೊಹಲ್ಲ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಸುಲ್ತಾನ್ ಷರೀಪ್ ವೃತ್ತ ಮುಖಾಂತರ ಮತ್ತೆ ಪ್ರವಾಸಿ ಮಂದಿರದಲ್ಲಿ ಅಂತ್ಯಗೊಂಡಿತು. ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಎಎಸ್ಪಿ ಸುಂದರರಾಜು, ಡಿವೈಸ್ಪಿ ಪ್ರಿಯದರ್ಶಿನಿ ಡಿ.ಆರ್.ಡಿವೈಸ್ಪಿ ಸೋಮಣ್ಣ..1 ವೃತ್ತ ಆರಕ್ಷರು, 13 ಇನ್ಸ್ ಪೆಕ್ಟರ್, 20ಕ್ಕೂ ಹೆಚ್ಚು ಎಎಸ್ಐ ,200ಕ್ಕೂ ಪೊಲೀಸ್ ಪೇದೆ ಹಾಗೂ ಬ್ಯಾಂಡ್ ವೃಂದ ಬಾಗವಹಿಸಿದ್ದವು.
ಘಟನೆ ವಿವರ:
ಚಾಮರಾಜನಗರದ ಸಂತೇಮರಹಳ್ಳಿ ವೃತ್ತದ ಬಳಿ ರಾತ್ರಿ 9.ರ ರ ಸಮಯದಲ್ಲಿ 15 ವರ್ಷದ ಅನ್ಯಕೋಮಿನ ಹುಡುಗನೊಬ್ಬ ಸೈಕಲ್ ವೀಲಿಂಗ್ ಮಾಡುತ್ತಿರುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಇನ್ನೊಂದು ಸಮುದಾಯದ ಯುವಕನಿಗೆ ತಾಗಿದೆ. ಇದನ್ನು ಪ್ರಶ್ನಿಸಿದ್ದ ಯುವಕ, ಹುಡುಗನನ್ನು ಗದರಿಸಿ ಕೈಯಲ್ಲಿ ಹೊಡೆದು ಕಳಿಸಿದ್ದ. ಈ ವಿಚಾರವನ್ನು ಹುಡುಗ ತನ್ನಸಮುದಾಯವರಿಗೆ ಹೇಳಿದಾಗ ಅವರು ಗುಂಪುಗೂಡಿಕೊಂಡು ಬಂದಿದ್ದರು. ಈ ವೇಳೆ ಘರ್ಷಣೆಯಾಗಿದೆ . ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಗುಂಪನ್ನು ಚದುರಿಸಿ,ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ತಂದಿದ್ದರು
ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಘಟನೆಯ ಬಳಿಕ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ವಿವಿದ ಠಾಣೆಯ ಪೊಲೀಸ್ ಸಿಬ್ಬಂದಿಗಳಿಂದ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು. ಪಟ್ಟಣದಲ್ಲಿ ದಿನೆ ದಿನೆ ಬೈಕಲ್ ಅಲ್ಲಿ ವ್ಹೀಲಿಂಗ್ ಮಾಡುತ್ತಿದ್ದರೂ ಪೊಲೀಸರು ಮಾತ್ರ ನಮಗೇನು ಸಂಬಂದವಿಲ್ಲ ಎಂಬಂತೆ ಇದ್ದದ್ದು ಇಂದಿನ ಸೈಕಲ್ ವ್ಹೀಲಿಂಗ್ ಇಂದ ಜನರೆ ಬುದ್ದಿ ಕಲಿಸಿದಂತಾಗಿದೆ. ಪೊಲೀಸರ ನಿಷ್ಕ್ರಿಯತೆ ಕೂಡ ಇಂತಹ ಅವಕಾಶಗಳಿಗೆ ಕಾರಣ ಕೂಡ ಆಗಿದೆ ಎಂದರೆ ತಪ್ಪಾಗಲಾರದು. ಈ ಸಂಬಂಧ ಮಾದ್ಯಮದವರೊಂದಿಗೆ ಮಾತನಾಡಿ, ಸೈಕಲ್ ವ್ಹೀಲಿಂಗ್ ಇಂತಹ ಘಟನೆ ಆಗಿದೆ ..ಈಗಾಗಲೇ ತಂಡ ಇದೆ..ಆದರೂ ತಂಡದ ಸಂಖ್ಯೆ ಹೆಚ್ಚಿಸಿ ಜಿಲ್ಲೆಯ ಎಲ್ಲಾ ಇನ್ಸ್ ಪೆಕ್ಟರ್ ತಂಡ ರಚಿಸಿ ವ್ಹೀಲಿಂಗ್ ಅಬಿಯಾನ ಮಾಡಿ ಸಂಪೂರ್ಣ ತಡೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.