ಮೈಸೂರು : ಮುರಘಾಮಠದ ಶರಣರ ಪ್ರಕರಣದಲ್ಲಿ ಸಾಕ್ಷ್ಯ ನಾಶವಾಗಿ ಹೋಗಿದೆ. ಮಕ್ಕಳ ಹಾಸ್ಟೆಲ್ ಬೆಡ್ ಶೀಟ್ ಎಲ್ಲಾ ಬದಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಆರೋಪ ಮಾಡಿದ್ದಾರೆ.
BIGG NEWS : ಸೆ.8 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸಮಾವೇಶ : ಸಮಾವೇಶದ ಸಿದ್ಧತೆ ಕುರಿತು ಬಿಜೆಪಿ ನಾಯಕರಿಂದ ಸಭೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರಘಾಮಠದ ಶರಣರ ಪ್ರಕರಣದಲ್ಲಿ ಸಾಕ್ಷ್ಯ ನಾಶವಾಗಿ ಹೋಗಿದೆ ಸಾಕ್ಷ್ಯ ನಾಶಕ್ಕೆ ಅವಕಾವನ್ನು ಸರ್ಕಾರವೇ ಕೊಟ್ಟಂತಿದೆ ಎಂದು ಕಿಡಿಕಾರಿದ್ದಾರೆ. ಮುರುಘಾಮಠದ ಸ್ವಾಮೀಜಿಗಳ ವಿರುದ್ದ ಪೋಕ್ಸೋ ಕಾಯ್ದೆ ದಾಖಲಾಗಿದೆ. ಅಪ್ರಾಪ್ತ ಮಕ್ಕಳು ಸುಳ್ಳು ಹೇಳುವುದಿಲ್ಲ. ಮಕ್ಕಳು ಅಮಾಯಕರು ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಪ್ರಕರಣದ ನ್ಯಾಯಾಧೀಶರಿಗೆ ಅಭಿನಂದನೆ. ಒಡನಾಡಿಯ ಪರಶು ಸ್ಟ್ಯಾನ್ಲಿ ಅವರ ಕಾರ್ಯ ಶ್ಲಾಘನೀಯ. ಅವರ ಮೇಲೆ ಬೆದರಿಕೆ ಶುರುವಾಗಿದೆ. ಯಾವುದೇ ಆಮಿಷಗಳು ಧಮ್ಕಿ ಹಣಕ್ಕೆ ಹೆದರದೆ ಕೆಲಸ ಮಾಡಿದೆ. ಪ್ರಕರಣ ಸಂಬಂಧ ಎಸ್.ಪಿ ಅಮಾನತು ಮಾಡಬೇಕು ಎಂದರು.
BIGG NEWS : ಸೆ.8 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸಮಾವೇಶ : ಸಮಾವೇಶದ ಸಿದ್ಧತೆ ಕುರಿತು ಬಿಜೆಪಿ ನಾಯಕರಿಂದ ಸಭೆ