ಯುಕೆ : ಮಗು ಜನನದ ನಂತ್ರ ತಂದೆ-ತಾಯಿ, ಕುಟುಂಬಸ್ಥರು ಮಗುವಿಗೆ ಯಾವ ಹೆಸರಿಡಬೇಕೆಂದು ಚರ್ಚಿಸುತ್ತಾರೆ. ಸಾಮಾನ್ಯವಾಗಿ ಮಗುವಿಗೆ ದೇವರ ಹೆಸರು, ಪ್ರಸಿದ್ಧ ವ್ಯಕ್ತಿಗಳ ಹೆಸರನ್ನಿಡುತ್ತಾರೆ. ಆದ್ರೆ, ಇಲ್ಲೊಂದು ದಂಪತಿಗಳು ತಮ್ಮ ಮುದ್ದಾದ ಮಗುವಿಗೆ ಭಾರತ ಖಾದ್ಯದ ಹೆಸರೊಂದನ್ನು ಇಟ್ಟಿದ್ದಾರೆ.
ಹೌದು, ಐರ್ಲೆಂಡ್ನಲ್ಲಿ ಈ ಘಟನೆ ನಡೆದಿದೆ. ಈ ದಂಪತಿಗಳಿಬ್ಬರು ಐರ್ಲೆಂಡ್ನ ಪ್ರಸಿದ್ಧ ರೆಸ್ಟೋರೆಂಟ್ಗೆ ಆಗಾಗ್ಗೆ ಹೋಗುತ್ತಿದ್ದರು. ಇಲ್ಲಿ ಅವರು ಸೇವಿಸುವ ಕಾದ್ಯವೊಂದು ಅವರ ಫೇವರಿಟ್ ಆಗಿತ್ತು. ಅದೇ ಭಾರತೀಯ ಖಾದ್ಯ ಪಕೋರಾ(ಪಕೋಡಾ). ಈ ಹೆಸರನ್ನು ತಮ್ಮ ಮಗುವಿಗೆ ಇಟ್ಟಿದ್ದಾರೆ.
ಈ ವಿಷಯ ತಿಳಿದ ರೆಸ್ಟೋರೆಂಟ್ ಮಾಲೀಕ ಸೋಷಿಯಲ್ ಮೀಡಿಯಾದಲ್ಲಿ ನವಜಾತ ಶಿಶುವಿನ ಫೋಟೋ ಜೊತೆಗೆ ಬಿಲ್ನ ಪ್ರತಿಯನ್ನು ಶೇರ್ ಮಾಡಿಕೊಂಡಿದ್ದಾರೆ.
BIGG NEWS: ಗಣೇಶ ವಿಸರ್ಜನೆಗೆ ಸಿಲಿಕಾನ್ ಸಿಟಿಯಲ್ಲಿ ಹೈಅಲರ್ಟ್ : ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ