ಮಡಿಕೇರಿ : ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಲು ನಿಗಧಿಪಡಿಸಿರುವ ಹೊರಗಿಡುವ ಮಾನದಂಡಗಳ ಆಧಾರದಲ್ಲಿ ವಾರ್ಷಿಕ ವರಮಾನ ರೂ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳ ಮಾಹಿತಿ ಪರಿಶೀಲಿಸಿ ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತನೆ ಮಾಡಲಾಗಿದೆ.
BIG NEWS: ಪಾಕಿಸ್ತಾನದಲ್ಲಿ ಭೀಕರ ಪ್ರವಾಹಕ್ಕೆ 1,300 ಮಂದಿ ಬಲಿ: ವರದಿ
ಆದರೆ ಜಿಲ್ಲೆಯಲ್ಲಿ ಒಟ್ಟು 850 ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಆದಾಯವು ತಪ್ಪಾಗಿ ನಮೂದಾಗಿದ್ದು, ಈ ಪಡಿತರ ಚೀಟಿಗಳನ್ನು ಕಂದಾಯಾಧಿಕಾರಿಗಳ ಮುಖಾಂತರ ಸಂಪೂರ್ಣವಾಗಿ ಪುನರ್ ಪರಿಶೀಲನೆ ಮಾಡಿ ಈ ಪಡಿತರ ಚೀಟಿಗಳನ್ನು ಬಿಪಿಎಲ್ (ಆದ್ಯತಾ ಪಡಿತರ ಚೀಟಿ)ಗಳನ್ನಾಗಿಯೇ ಮುಂದುವರೆಸಲು ಸರ್ಕಾರವನ್ನು ಕೋರಲಾಗಿತ್ತು.
BIGG NEWS : ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳ ಬಂಧನ : ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಶ್ರೀಗಳು ವಜಾ
ಅದರಂತೆ ಸರ್ಕಾರವು 850 ಪಡಿತರ ಚೀಟಿಗಳನ್ನು ಆದ್ಯತಾ ಪಡಿತರ ಚೀಟಿಯನ್ನಾಗಿ ಮುಂದುವರೆಸಲು ಅನುಮತಿ ನೀಡಿ, ಪರಿವರ್ತನೆ ಕೂಡ ಮಾಡಿದೆ. ಈ 850 ಪಡಿತರ ಚೀಟಿದಾರರಿಗೆ ಮುಂದಿನ ಅಕ್ಟೋಬರ್ 2022 ರ ಮಾಹೆಯಿಂದ ಪಡಿತರ ಹಂಚಿಕೆ ಪ್ರಾರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
BIGG BREAKING NEWS : ರಾಮನಗರದಲ್ಲಿ ಘೋರ ದುರಂತ : ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ!