ನವದೆಹಲಿ : ರೈಲು ಪ್ರಯಾಣದ ವೇಳೆ ರೈಲು ಬರುವುದು ವಿಳಂಬವಾದಲ್ಲಿIRCTCಯಿಂದ ಕೆಲವು ಸೌಲಭ್ಯ ಪಡೆದುಕೊಳ್ಳಲು ನಿಮಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿ ನೀಡಿದ್ದು, ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ನೀಡಿದೆ.
Good News : `BPL’ ಕುಟುಂಬಗಳಿಗೆ ಗುಡ್ ನ್ಯೂಸ್ : ಹಳೇ ರೇಷನ್ ಕಾರ್ಡ್ ಮುಂದುವರಿಕೆಗೆ ಅನುಮತಿ
ಹೌದು, ರೈಲು ತಡವಾದರೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಕೆಲವು ಸೇವೆಗಳನ್ನು ಉಚಿತವಾಗಿ ನೀಡುತ್ತದೆ. ನಿಮ್ಮ ರೈಲು ನಿಗದಿತ ಸಮಯಕ್ಕಿಂತ ತಡವಾದರೆ IRCTC ನಿಮಗೆ ಆಹಾರ ಮತ್ತು ತಂಪು ಪಾನೀಯವನ್ನು ನೀಡುತ್ತದೆ . IRCTCಯಿಂದ ಈ ಆಹಾರವನ್ನು ನಿಮಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉಚಿತ ಆಹಾರ ಮತ್ತು ತಂಪು ಪಾನೀಯ ಪಡೆಯಲು ನೀವು ಯಾವುದೇ ರೀತಿ ಹಿಂಜರಿಯುವ ಅಗತ್ಯವಿಲ್ಲ.
Good News : `BPL’ ಕುಟುಂಬಗಳಿಗೆ ಗುಡ್ ನ್ಯೂಸ್ : ಹಳೇ ರೇಷನ್ ಕಾರ್ಡ್ ಮುಂದುವರಿಕೆಗೆ ಅನುಮತಿ
IRCTCಯೇ ನೀಡುವ ಈ ಸೌಲಭ್ಯವನ್ನು ಪಡೆದುಕೊಳ್ಳುವುದು ನಿಮ್ಮ ಹಕ್ಕಾಗಿರುತ್ತದೆ. ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ರೈಲು ತಡವಾಗಿ ಬಂದಾಗ ಪ್ರಯಾಣಿಕರಿಗೆ IRCTCಯ ಅಡುಗೆ ನೀತಿಯಡಿ ಉಪಹಾರ ಮತ್ತು ಲಘು ಊಟವನ್ನು ನೀಡಲಾಗುತ್ತದೆ.
Good News : `BPL’ ಕುಟುಂಬಗಳಿಗೆ ಗುಡ್ ನ್ಯೂಸ್ : ಹಳೇ ರೇಷನ್ ಕಾರ್ಡ್ ಮುಂದುವರಿಕೆಗೆ ಅನುಮತಿ
IRCTC ನಿಯಮಗಳ ಪ್ರಕಾರ, ರೈಲು ತಡವಾದರೆ ಪ್ರಯಾಣಿಕರಿಗೆ ಉಚಿತ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ರೈಲು 30 ನಿಮಿಷ ತಡವಾದರೆ ನಿಮಗೆ ಊಟದ ಸೌಲಭ್ಯ ಸಿಗುವುದಿಲ್ಲ. ಅಡುಗೆ ನೀತಿಯಡಿ ರೈಲು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ತಡವಾಗಿದ್ದರೆ ಶತಾಬ್ದಿ, ರಾಜಧಾನಿ ಮತ್ತು ತುರಂತೋ ಎಕ್ಸ್ಪ್ರೆಸ್ ರೈಲುಗಳ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ.
IRCTC ನೀತಿಯ ಪ್ರಕಾರ, ಉಪಾಹಾರದಲ್ಲಿ ಚಹಾ ಅಥವಾ ಕಾಫಿ ಮತ್ತು 2 ಬಿಸ್ಕತ್ತುಗಳನ್ನು ನೀಡಲಾಗುತ್ತದೆ. ಸಂಜೆಯ ತಿಂಡಿಯಲ್ಲಿ ಚಹಾ ಅಥವಾ ಕಾಫಿ ಮತ್ತು 4 ಬ್ರೆಡ್ ಸ್ಲೈಸ್ಗಳು ಮತ್ತು ಬಟರ್ ನೀಡಲಾಗುತ್ತದೆ. IRCTC ಯಿಂದ ಪ್ರಯಾಣಿಕರಿಗೆ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ಅನ್ನ, ಉದ್ದಿನಬೇಳೆ ಸಾರು ಮತ್ತು ಉಪ್ಪಿನಕಾಯಿ ಪ್ಯಾಕೆಟ್ಗಳನ್ನು ನೀಡಲಾಗುತ್ತದೆ. ಅಥವಾ 7 ಪೂರಿಗಳು, ಮಿಕ್ಸ್ ವೆಜ್/ಆಲೂ ಭಜಿ, ಉಪ್ಪಿನಕಾಯಿ ಪ್ಯಾಕೆಟ್ ಮತ್ತು ತಲಾ 1 ಪ್ಯಾಕೆಟ್ ಉಪ್ಪು ಮತ್ತು Pepper ನೀಡಲಾಗುತ್ತದೆ.
Good News : `BPL’ ಕುಟುಂಬಗಳಿಗೆ ಗುಡ್ ನ್ಯೂಸ್ : ಹಳೇ ರೇಷನ್ ಕಾರ್ಡ್ ಮುಂದುವರಿಕೆಗೆ ಅನುಮತಿ