ಬೆಂಗಳೂರು : ಚಾಮರಾಜಪೇಟೆ ಗಣೇಶೋತ್ಸವ ಗದ್ದಲ್ಲ ಶುರುವಾಗಿದ್ದು, ಚಾಮರಾಜಪೇಟೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಗಣೇಶ ಮುರ್ತಿ ಪ್ರತಿಷ್ಠಾಪಿಸಲಾಗಿದೆ.
BIGG NEWS : ಮುರುಘಾ ಶ್ರೀಗಳ ಬಂಧನದ ಬೆನ್ನಲ್ಲೇ ಮೂವರು ಆರೋಪಿಗಳು ಮಠದಿಂದ ನಾಪತ್ತೆ
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಇಲ್ಲ ಎಂದು ಹೈಕೋರ್ಟ್ ಸೂಚನೆ ನೀಡಿದೆ. ಚಾಮರಾಜಪೇಟೆಯ ಈದ್ಗಾ ಮೈದಾನದ ಎದುರಿನ 2 ನೇ ಮುಖ್ಯ ರಸ್ತೆಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಇಂದಿನಿಂದ 7 ದಿನಗಳ ಕಾಲ ಗಣೇಶೋತ್ಸವ ನಡೆಯಲಿದೆ.
BIGG BREAKING NEWS : ರಾಮನಗರದಲ್ಲಿ ಘೋರ ದುರಂತ : ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ!
ಗಣೇಶ ಮೆರವಣಿಗೆಗೆ ಸಮಿತಿ ಈಗಾಗಲೇ ರೂಟ್ ಮ್ಯಾಪ್ ಸಿದ್ದಪಡಿಸಿದ್ದು, ಸೆ. 10 ರಂದು ಚಾಮರಾಜಪೇಟೆ ಮುಖ್ಯ ರಸ್ತೆ ಮೂಲಕ ಪಾದರಾಯನಪುರದಿಂದ ಮೆರವಣಿಗೆ ನಡೆಯಲಿದ್ದು, ಜೆ.ಜೆ.ಆರ್.ನಗರ, ಪಾದರಾಯನಪುರದಲ್ಲಿ ಮೆರವಣಿಗೆಗೆ ಸ್ಥಳೀಯ ಪೊಲೀಸರ ಅನುಮತಿ ಸಿಕ್ಕಿಲ್ಲ. ಈದ್ಗಾ ಮೈದಾನ ಹತ್ತಿರದಲ್ಲೇ ಇರುವ ಕಾರಣ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದಾರೆ. ಇದರಿಂದಾಗಿ ಪೊಲೀಸ್ ಠಾಣೆ ಮುಂದೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.