ಬೆಂಗಳೂರು :ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯಮಿದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2,750.55 ಕೋಟಿ ರೂ.ಗಳ 53 ಹೂಡಿಕೆ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಇದರಿಂದ 8,619 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
BIGG NEWS : ಜಮ್ಮು& ಕಾಶ್ಮೀರದ ರಜೌರಿಯಲ್ಲಿ ಬಂಧಿತ ಪಾಕಿಸ್ತಾನಿ ಭಯೋತ್ಪಾದಕ ಹೃದಯಾಘಾತದಿಂದ ಸಾವು
ಶನಿವಾರ ಸಂಜೆ ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಕ್ಲಿಯರೆನ್ಸ್ ಕಮಿಟಿಯ (ಎಸ್ ಎಲ್ ಎಸ್ ಡಬ್ಲ್ಯುಸಿಸಿ) 134ನೇ ಸಭೆಯಲ್ಲಿ ಹೂಡಿಕೆಗೆ ಅನುಮೋದನೆ ನೀಡಲಾಗಿದೆ ಎಂದು ನಿರಾಣಿ ಹೇಳಿದರು.
ನವೆಂಬರ್ 2, 3 ಮತ್ತು 4 ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಇದು ರಾಜ್ಯದಲ್ಲಿ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಉಕೆಮ್ ಅಗ್ರಿ ಇನ್ಫ್ರಾ ಲಿಮಿಟೆಡ್, ಸುಂದರಿ ಶುಗರ್ಸ್ ಲಿಮಿಟೆಡ್, ಎವರೆಸ್ಟ್ ಇಂಡಸ್ಟ್ರೀಸ್, ಕೊಪ್ಪಳ ಟಾಯ್ಸ್ ಮೌಲ್ಡಿಂಗ್ ಕೋ ಪ್ರೈವೇಟ್ ಲಿಮಿಟೆಡ್, ಎಕ್ಯೂಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ಕೆಆರ್ಬಿಎಲ್ ಲಿಮಿಟೆಡ್, ಏಕ್ಯೂಸ್ ಟಾಯ್ಸ್, ಹೆಲ್ಲಾ ಇನ್ಫ್ರಾ ಮಾರ್ಕೆಟ್ ಮತ್ತು ಸಾವಿತ್ರಿ ಪ್ಲೈಬೋರ್ಡ್ ಸೇರಿದಂತೆ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.