ಬೆಂಗಳೂರು : ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ವಿವಿಧ ಮಾರ್ಗಗಳ 28 ಪ್ಯಾಸೆಂಜರ್ ರೈಲುಗಳನ್ನು ಇಂದು ಮತ್ತು ನಾಳೆ ರದ್ದು ಮಾಡಲಾಗಿದೆ.
BIGG NEWS : ಸೆಪ್ಟೆಂಬರ್ 6 ರಂದು ರಾಜ್ಯ ಸರ್ಕಾರಿ ನೌಕಕರ ದಿನಾಚರಣೆ : ಸಾಧಕರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
ತಾಂತ್ರಿಕ ನಿರ್ವಹಣಾ ಕಾಮಗಾರರಿ ಹಿನ್ನೆಲೆಯಲ್ಲಿ ವಿವಿಧ ಮಾರ್ಗಗಳ 28 ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಲಾಗಿದೆ. ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕೆಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಧರ್ಮಾವರಂ, ಜೋಲಾರಪೇಟೆ, ತುಮಕೂರು, ಮಾರಿಕುಪ್ಪಂ, ರಾಮನಗರ, ಕುಪ್ಪಂ, ಬಂಗಾರಪೇಟೆ, ಸತ್ಯಸಾಯಿ ಪ್ರಶಾಂತಿ ನಿಲಯ, ವೈಪ್ ಫೀಲ್ಡ್ ಗೆ ಹಾಗೂ ಮಾರಿಕುಪ್ಪಂನಿಂದ ಸರ್. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯ್ಯಪ್ಪನಹಳ್ಳಿ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಸೆ. 4 ರಂದು ರದ್ದು ಮಾಡಲಾಗಿದೆ.
BIGG NEWS : ಮುರುಘಾಮಠಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ ಜಡ್ಜ್ `ವಸ್ತ್ರಮಠ’ ನೇಮಕ
ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಕುಲೆಂ-ವಾಸ್ಡೋಡ ಗಾಮಾ, ಹುಬ್ಬಳ್ಳಿಯಿಂದ ಕಾರಟಗಿ, ಚಿತ್ರದುರ್ಗ, ವಿಜಯಪುರ, ಸೋಲಾಪುರ, ಹರಿಹರ-ಹೊಸಪೇಟೆ, ಅರಸೀಕೆರೆ-ಹುಬ್ಬಳ್ಳಿ, ಹಾಗೂ ಮೈಸೂರು ರೈಲ್ವೆ ವಿಭಾಗದಲ್ಲಿ ಚಿಕ್ಕಮಗಳೂರು-ಶಿವಮೊಗ್ಗ ಟೌನ್, ತಾಳಗುಪ್ಪ-ಶಿವಮೊಗ್ಗ ಟೌನ್, ತುಮಕೂರು-ಶಿವಮೊಗ್ಗ ಟೌನ್, ಶಿವಮೊಗ್ಗ ಟೌನ್-ಮೈಸೂರು, ಮೈಸೂರು-ಅರಸೀಕೆರೆ ಪ್ಯಾಸೆಂಜರ್ ಇಂದು ರದ್ದಾಗಿವೆ.