ಚಿತ್ರದುರ್ಗ : ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳು ಬಂಧನವಾಗಿದ್ದು, ಇದೀಗ ಚಿತ್ರದುರ್ಗದ ಮುರುಘಾ ಮಠದ ನೂತನ ಆಡಳಿತ ಅಧಿಕಾರಿಯಾಗಿ ನಿವೃತ್ತ ನ್ಯಾಯಮೂರ್ತಿ ಎಸ್.ಬಿ. ವಸ್ತ್ರಮಠದ್ ಅವರನ್ನು ನೇಮಕ ಮಾಡಲಾಗಿದೆ.
BIGG NEWS : `CET RANK’ ಪಟ್ಟಿ ರದ್ದು : ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಮುರುಘಾಮಠದಲ್ಲಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಅವರು ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಲೈಂಗಿಕ ದೌರ್ಜನ ಆರೋಪದ ಹಿನ್ನೆಲೆಯಲ್ಲಿ ಮಠದ ಆಡಳಿತಾಧಿಕಾರಿಯಾಗಿದ್ದ ಮಾಜಿ ಶಾಸಕ ಎಸ್. ಕೆ ಬಸವರಾಜನವರನ್ನು ಆಡಳಿತ ಅಧಿಕಾರಿಯಿಂದ ತೆಗೆದು ಹಾಕಾಗಿತ್ತು.
ಎಸ್.ಕೆ.ಬಸವರಾಜ ಅವರ ತೆರವಾದ ಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿ ಎಸ್.ಬಿ. ವಸ್ತ್ರಮಠದ್ ಅವರನ್ನು ನೇಮಕ ಮಾಡಲಾಗಿದೆ. ಮುರುಘಾ ಶ್ರೀಗಳ ಬಂಧನವಾದ ಎರಡು ದಿನಗಳ ನಂತರ ನಿವೃತ್ತ ನ್ಯಾಯಮೂರ್ತಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ವಿಜಯಪುರ: ಭಕ್ತರ ಭಾರ ತಾಳಲಾರದೇ ನೆಲಕ್ಕುರುಳಿದ ಗಣೇಶ ಮಂಟಪ: ಹಲವರಿಗೆ ಗಾಯ