ಹಾವೇರಿ : ಅಗ್ನಿಪಥ್ ಯೋಜನೆಯಡಿ ಅಗ್ನಿವೀರರ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನಕಲಿ (ಸುಳ್ಳು) ದಾಖಲೆಗಳನ್ನು ಸಲ್ಲಿಸಿದರೆ ಅಂತವರನ್ನು ಪೆÇಲೀಸ್ ವಶಕ್ಕೆ ನೀಡಲಾಗವುದು ಎಂದು ಸೇನಾ ನೇಮಕಾತಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
BREAKING NEWS: ಕೊಲಂಬಿಯಾದಲ್ಲಿ ಪೊಲೀಸ್ ವಾಹನದ ಮೇಲೆ ಸ್ಫೋಟಕ ದಾಳಿ, ಎಂಟು ಅಧಿಕಾರಿಗಳು ಸಾವು
ಹಾವೇರಿ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರರ ನೇಮಕಾತಿ ಅತಂತ್ಯ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಯಾವುದೇ ಅಭ್ಯರ್ಥಿ ಸುಳ್ಳು ಶೈಕ್ಷಣಿಕ ಅಥವಾ ಇತರ ಪ್ರಮಾಣಪತ್ರಗಳನ್ನು ಸಲ್ಲಿಸಲು ಪ್ರಯತ್ನಿಸಿದರೆ, ಪರಿಶೀಲನೆ ವೇಳೆ ನಕಲು ಎಂದು ರುಜುವಾತಾದರೆ ಅಂತಹ ಅಭ್ಯರ್ಥಿಗಳ ವಿರುದ್ಧ ದೂರು ದಾಖಲಿಸಲಾಗುವುದು ಎಂದಿದ್ದಾರೆ.
BIGG BREAKING NEWS : ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿಂದು ಮುರುಘಾಶ್ರೀ ವಿಚಾರಣೆ
ನೇಮಕಾತಿಯ ಎರಡನೇ ದಿನವಾದ ಸೆಪ್ಟಂಬರ್ 2 ರಂದು ಎರಡು ಸಾವಿರ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದಾರೆ. ಸೆಪ್ಟಂಬರ್ 3 ರಂದು ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಧಾರವಾಡ ಜಿಲ್ಲೆಯ ಧಾರವಾಡ ಹಾಗೂ ಕುಂದಗೋಳ ತಾಲೂಕಿನ 3,780 ಅಭ್ಯರ್ಥಿಗಳು ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ.