ಮಹಾರಾಷ್ಟ್ರ: ಬಾಲಕಿಯೊಬ್ಬಳು ತನ್ನ ತಂದೆಯೊಂದಿಗೆ ಐಸ್ಕ್ರೀಂ ತಿನ್ನಲು ಅಂಗಡಿಗೆ ಹೋದಾಗ, ಅಲ್ಲಿದ್ದ ಐಸ್ಕ್ರೀಂ ಫ್ರಿಡ್ಜ್ನಲ್ಲಿ ಉಂಟಾದ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದಿದೆ
ಬಾಲಕಿ ಗ್ರೀಷ್ಮಾ ತಿನ್ನಲು ಐಸ್ಕ್ರೀಮ್ ಬೇಕು ಎಂದಾಗ ಆಕೆಯನ್ನು ಕರೆದುಕೊಂಡು ತಂದೆ ವಿಶಾಲ್ ಐಸ್ಕ್ರೀಮ್ ಅಂಗಡಿಗೆ ಹೋಗಿದ್ದಾರೆ. ಈ ವೇಳೆ ಅಲ್ಲಿದ್ದ ಫ್ರಿಡ್ಜ್ನಲ್ಲಿ ಐಸ್ಕ್ರೀಂ ತೆಗೆದುಕೊಳ್ಳಲು ವಿಶಾಲ್ ನೋಡುತ್ತಿರುತ್ತಾರೆ. ಈ ವೇಳೆ ಗ್ರೀಷ್ಮಾ ಫ್ರಿಡ್ಜ್ಅನ್ನು ಹಿಡಿದು ನಿಂತು ನೋಡುತ್ತಿರುತ್ತಾಳೆ. ಈ ಸಂದರ್ಭದಲ್ಲಿ ವಿದ್ಯುತ್ ಗ್ರೀಷ್ಮಾ ಸಂಪರ್ಕಕ್ಕೆ ಬಂದಿದ್ದು, ಆಕೆ ಅಲ್ಲೇ ಕೊನೆಯುಸಿರೆಳೆದಿದ್ದಾಳೆ.
ನಂತ್ರ ಕೆಳಗೆ ಬಿದ್ದ ಗ್ರೀಷ್ಮಾಳನ್ನು ತಂದೆ ಹಾಗೂ ಅಲ್ಲಿದ್ದವರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ಬಾಲಕಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಎಸ್ಕಲೇಟರ್ ಮೇಲಿಂದ ಜಾರಿ ಬಿದ್ದ ಸೂಟ್ಕೇಸ್ ಬಡಿದು ಮಹಿಳೆ ಸಾವು… ಇಲ್ಲಿದೆ ಭಯಾನಕ ವಿಡಿಯೋ
BIGG NEWS : ಮುರುಘಾ ಮಠದ ಪ್ರಭಾರ ಉತ್ತರಾಧಿಕಾರಿಯಾಗಿ ಮಹಾಂತರುದ್ರ ಶ್ರೀ ನೇಮಕ