ಚಿತ್ರದುರ್ಗ : ಕಳೆದ ರಾತ್ರಿ ಪೋಕ್ಸೋ ಕೇಸ್ʼನಲ್ಲಿ ಅರೆಸ್ಟ್ ಆಗಿರುವ ಮುರುಘಾಶ್ರೀಗಳನ್ನ ಸಧ್ಯ 3 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.
ಇದಕ್ಕೂ ಮುಂಚೆ ಆರೋಪಿಗಳನ್ನ ಖುದ್ದು ಕೋರ್ಟ್ʼಗೆ ಹಾಜರುಪಡಿಸುವಂತೆ ಜೈಲರ್ʼಗೆ ಚಿತ್ರದುರ್ಗದ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಚಿಸಿತ್ತು. ಅದ್ರಂತೆ, ನ್ಯಾಯಾಲಯದ ಸೂಚನೆಯಂತೆ ಶ್ರೀಗಳನ್ನ ನ್ಯಾಯಾಲಯಕ್ಕೆ ಹಾಜರು ಪಡೆಸಲಾಯ್ತು. ಸಧ್ಯ ಕೋರ್ಟ್ ಆದೇಶ ಹೊರ ಬಿದ್ದಿದ್ದು, ಮುಂದಿನ ಮೂರು ದಿನಗಳವರೆಗೆ ಕಸ್ಟಡಿಗೆ ನೀಡಿದೆ.
ಅಂದ್ಹಾಗೆ, ಶರಣರನ್ನ ವಿಚಾರಣೆಗಾಗಿ 5 ದಿನಗಳವರೆಗೆ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದರು. ಆದ್ರೆ ಸಧ್ಯ ನ್ಯಾಯಾಲಯ 3 ದಿನಗಳವರೆಗೆ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.