ಬೆಂಗಳೂರು: ಮುರಘಾಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದೆ. ಈ ಕುರಿತು ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ, ಮುರುಘಾ ಶ್ರೀಗಳ ವಿಚಾರದಲ್ಲಿ ನ್ಯಾಯಯುತ ತನಿಖೆ ಆಗಿ ಸತ್ಯ ಹೊರಗೆ ಬರಲಿ ಎಂದರು.
BIGG NEWS: ಬೆಂಗಳೂರಿನಲ್ಲಿ ರೈಲ್ವೆ ಇಲಾಖೆ ನೌಕರನ ಸೋಗಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ
ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಶ್ರೀಗಳ ಬಂಧನವಾಗಿದೆ. ಆದರೆ ಅದೇನು ಅಂತಾ ಸತ್ಯಾಸತ್ಯತೆ ಹೊರಗಡೆ ಬರಲಿ. ವಿಚಾರ ಏನಿದೆ, ಮಕ್ಕಳು ಏನು ಹೇಳಿಕೆ ಕೊಟ್ಟಿದ್ದಾರೆ ವಿಚಾರಣೆ ಆಗಲಿ. ಬಸವರಾಜ್ ಮತ್ತು ಅವರ ಪತ್ನಿಯ ಪಾತ್ರ ಏನಿದೆ ಎಂಬುದರ ತನಿಖೆ ಆಗಲಿ. ಇದೆಲ್ಲದರ ಬಗ್ಗೆ ಸಂಪೂರ್ಣ ತನಿಖೆಯಾಗಲಿ ಎಂದರು.
BIGG NEWS: ಬೆಂಗಳೂರಿನಲ್ಲಿ ರೈಲ್ವೆ ಇಲಾಖೆ ನೌಕರನ ಸೋಗಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ
ಬಾಲಕಿಯರ ಬಗ್ಗೆ ಮಾತನಾಡುವುದಕ್ಕೂ, ಮುರುಘಾ ಶ್ರೀಗಳ ಬಗ್ಗೆ ಮಾತನಾಡುವುದಕ್ಕೂ ವ್ಯತ್ಯಾಸ ಇದೆ. ಇವರು ಇಂದು ಪರಿವರ್ತನೆ ಮಾಡುತ್ತಾ, ಅಡ್ಡಪಲ್ಲಕಿ ಮಾಡಿಸಿಕೊಳ್ಳದೆ ಇರುವ ಸ್ವಾಮೀಜಿಯವರು. ದಲಿತರು, ಹಿಂದುಳಿದವರ ಸ್ವಾಮಿಗಳನ್ನಾಗಿ ಮಾಡಿದವರು. ಹೀಗಾಗಿ ಸತ್ಯಾಸತ್ಯತೆ ಹೊರಗಡೆ ಬರಬೇಕು. ತಪ್ಪು ಮಾಡಿದ್ದಾರೋ ಇಲ್ಲವೋ ಕೂಲಂಕುಶವಾಗಿ ತನಿಖೆ ಆಗಬೇಕು ಎಂದು ಹೇಳಿದರು.