ನವದೆಹಲಿ : ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(All India Football Federation)ನ ನೂತನ ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ(Kalyan Chaubey) ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.
ಹೌದು, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ʼನ ನೂತನ ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ ಶುಕ್ರವಾರ ಆಯ್ಕೆಯಾಗಿದ್ದಾರೆ. ಭಾರತದ ಮಾಜಿ ನಾಯಕ ಬೈಚುಂಗ್ ಭುಟಿಯಾ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದ್ರೆ, ಅವ್ರು ಚುನಾವಣೆಯಲ್ಲಿ ಚೌಬೆ ವಿರುದ್ಧ ಸೋತರು. ಭುಟಿಯಾ ಕೇವಲ ಒಂದು ಮತ ಪಡೆದ್ರೆ, ಚೌಬೆ 33 ಮತಗಳನ್ನ ಪಡೆದರು. ಈ ಗೆಲುವಿನ ಪರಿಣಾಮವಾಗಿ, ಚೌಬೆ ಎಐಎಫ್ಎಫ್ನ ಮೊದಲ ಆಟಗಾರ-ಅಧ್ಯಕ್ಷರಾಗಿದ್ದಾರೆ.