ದಕ್ಷಿಣಕನ್ನಡ : ಮಂಗಳೂರಿಗೆ ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಬಿಜೆಪಿ ಕಾರ್ಯಕರ್ತರು ಹಾಗೂ ಜನಸಾಗರವೇ ಹರಿದು ಬರುತ್ತಿದೆ ̤ನಮೋ ಆಗಮನಕ್ಕೆ ಕರಾವಳಿ ಕೇಸರಿ ಮಾಯಗೊಂಡಿದೆ.
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ದ.ಕ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಸಂಘದಿಂದ 1.25 ಲಕ್ಷ ಮಂದಿಗೆ ಬೇಕಾಗುವಷ್ಟು ವೆಜ್ ಪಲಾವ್, ಸಲಾಡ್, ನೀರಿನ ವ್ಯವಸ್ಥೆ ಮಾಡಲಾಗಿದೆ.
60 ಕೌಂಟರ್ಗಳಲ್ಲಿ 3,600 ಮಂದಿ ಕೆಲಸಗಾರರು ಮುಂಜಾನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಸೋಸಿಯೇಶನ್ ಅಧ್ಯಕ್ಷ ರಾಜಗೋಪಾಲ್ ರೈ ಮತ್ತು ಗೌರವಾಧ್ಯಕ್ಷ ಸುಧಾಕರ ಕಾಮತ್ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಜತೆಗೆ ಒಂದು ಲಕ್ಷ ಪ್ಯಾಕೆಟ್ ಬಿಸ್ಕೆಟ್, ಒಂದು ಲಕ್ಷ ಚಾಕ್ಲೆಟ್ ವ್ಯವಸ್ಥೆ ಇದೆ.
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ದ.ಕ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಸಂಘದಿಂದ 1.25 ಲಕ್ಷ ಮಂದಿಗೆ ಬೇಕಾಗುವಷ್ಟು ವೆಜ್ ಪಲಾವ್, ಸಲಾಡ್, ನೀರಿನ ವ್ಯವಸ್ಥೆ ಮಾಡಲಾಗಿದೆ.
60 ಕೌಂಟರ್ಗಳಲ್ಲಿ 3,600 ಮಂದಿ ಕೆಲಸಗಾರರು ಮುಂಜಾನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಸೋಸಿಯೇಶನ್ ಅಧ್ಯಕ್ಷ ರಾಜಗೋಪಾಲ್ ರೈ ಮತ್ತು ಗೌರವಾಧ್ಯಕ್ಷ ಸುಧಾಕರ ಕಾಮತ್ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಜತೆಗೆ ಒಂದು ಲಕ್ಷ ಪ್ಯಾಕೆಟ್ ಬಿಸ್ಕೆಟ್, ಒಂದು ಲಕ್ಷ ಚಾಕ್ಲೆಟ್ ವ್ಯವಸ್ಥೆ ಇದೆ.
ಮಂಗಳೂರಿಗೆ ಆಗಮಿಸುವ ಮೋದಿ ಕಾರ್ಯಕ್ರಮಕ್ಕೆ ಜರ್ಮನ್ ಟೆಕ್ನಾಲಜಿಯಲ್ಲಿ ಪೆಂಡಲ್ ಹಾಕಲಾಗಿದೆ. ಮಧ್ಯಾಹ್ನ 1255ಕ್ಕೆ ಹೆಲಿಕಾಪ್ಟರ್ ಮೂಲಕ ಎನ್ಎಂಪಿಎಗೆ ಆಗಮಿಸಲಿದ್ದಾರೆ. ಒಂದುವರೆ ಲಕ್ಷ ಜನರು ಆಗಮಿಸುವ ಸಾಧ್ಯತೆಯಿದೆ. ಎರಡುಸಾವಿರ ಬಸ್ಸು, ಕಾರಿನಲ್ಲಿ ಜನರು ಆಗಮಿಸುತ್ತಿದ್ದಾರೆ.