ಚಿತ್ರದುರ್ಗ : ಪೋಕ್ಸೊ ಕಾಯ್ದೆಯಡಿ ಮುರುಘಾಮಠದ ಶ್ರೀಗಳ ಬಂಧನದ ಬೆನ್ನಲ್ಲೇ ಇದೀಗ ಚಿತ್ರದುರ್ಗ ಪೊಲೀಸರಿಂದ ಪ್ರಕರಣದ 2 ನೇ ಆರೋಪಿ ಲೇಡಿ ವಾರ್ಡನ್ ಬಂಧಿಸಲಾಗಿದೆ.
ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮುರುಘಾಮಠದ ಶ್ರೀಗಳನ್ನು ನಿನ್ನೆ ರಾತ್ರಿ ಬಂಧಿಸಲಾಗಿತ್ತು. ಇದೀಗ ಪ್ರಕರಣದ 2 ನೇ ಆರೋಪಿ ಲೇಡಿ ವಾರ್ಡನ್ ಬಂಧಿಸಲಾಗಿದೆ. ಮುರುಘಾ ಶ್ರೀ ಪ್ರಕರಣದಲ್ಲಿ ಚಿತ್ರದುರ್ಗದ ಪೊಲೀಸರು ನಿನ್ನೆ ಲೇಡಿ ವಾರ್ಡನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಲೇಡಿ ವಾರ್ಡನ್ ಬಂಧಿಸಲಾಗಿದೆ. ಸದ್ಯ ಲೇಡಿ ವಾರ್ಡನ್ ರಶ್ಮಿಯನ್ನು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಪಡೆಯುವ ಸಾಧ್ಯತೆ ಇದೆ.
ಪ್ರಕರಣದ ಹಿನ್ನಲೆ: ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಲಿಂಗಾಯತ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ವಿರುದ್ಧ ಕರ್ನಾಟಕ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನೋಟಿಸ್ ನೀಡಲಾಗಿತ್ತು . ಈ ಪ್ರಕರಣದಲ್ಲಿ ಎ 2 ಆರೋಪಿ ಹಾಸ್ಟೆಲ್ ನ ಲೇಡಿ ವಾರ್ಡನ್ ರಶ್ಮಿ ಹೆಸರು ಸಹ ಕೇಳಿಬಂದಿತ್ತು. ಇದೀಗ ರಶ್ಮಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಮಠದಿಂದ ನಡೆಸಲ್ಪಡುವ ಶಾಲೆಯಲ್ಲಿ ಕಲಿಯುತ್ತಿರುವ 15 ಮತ್ತು 16 ವರ್ಷದ ಇಬ್ಬರು ಬಾಲಕಿಯರು ಮೂರೂವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.