ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಇದರಿಂದಲೇ ಪ್ರವಾಹ ಸಮಸ್ಯೆ ಆಗುತ್ತಿದೆ ಎಂದು ಆರೋಪಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಸದ ಪ್ರತಾಪ್ಸಿಂಹ ದಶಪಥ ಕಾಮಗಾರಿಯ ಪರಿಶೀಲಿಸಿದ್ದಾರೆ.
BIGG BREAKING NEWS : ಮುರುಘಾಮಠದ ಶ್ರೀಗಳಿಗೆ ಎದೆನೋವು : ಶ್ರೀಗಳು ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್
ಬಳಿಕ ಮಾತನಾಡಿರುವ ಅವರು, ರಾಮನಗರದಲ್ಲಿ ನಾಲೆಗಳು ಒತ್ತುವರಿ ಆಗಿದ್ದರಿಂದ ನೀರು ಜಾಸ್ತಿ ಹರಿದು ರಸ್ತೆಯಲ್ಲಿ ನಿಂತಿದೆ. ಅದಕ್ಕೆ ನಾನು ಜನರ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ
ಕಳೆದ ಒಂದು ವಾರದಿಂದ ಸಿದ್ದರಾಮಯ್ಯ ನನ್ನ ಬೈತಾ ಇದ್ರು. ಈಗ ಕುಮಾರಣ್ಣ ಬೈತಾ ಇದಾರೆ. ನಾನು ಒಂದು ರೀತಿ ಕೆಲಸದವನು, ನಾನೊಬ್ಬ ಕಾರ್ಮಿಕ. ಯಾರ್ಯಾರು ಈ ಕ್ಷೇತ್ರದ, ರಾಜ್ಯದ ಮಾಲೀಕರು ಅನ್ಕೊಂಡಿದಾರೊ ಅವರಿಗೆ ಕಾರ್ಮಿಕರನ್ನ ಬೈಯ್ಯುವಂತ ಹಕ್ಕಿದೆ. ಅದರಿಂದ ನನಗೇನೂ ಬೇಸರ ಇಲ್ಲ ಎಂದು ಹೇಳಿದ್ದಾರೆ.
ರಾಮದೇವರ ಬೆಟ್ಟದ ಕಡೆಯಿಂದ ಹರಿದುಬಂದ ನೀರಿನಿಂದಾಗಿ ಮುಳುಗಿದ್ದ ಸಂಗಬಸಪ್ಪನದೊಡ್ಡಿ ಸಮೀಪದ ಸ್ಥಳಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಧರ್, ಡಿಬಿಎಲ್ ಪ್ರಾಜೆಕ್ಟ್ ಮೆನೇಜರ್ ಗೋವಿಂದ್, ಸಾಜಿ ರತ್ನಾಕರ್ ಮತ್ತು NHAI ನಿಂದ ಬಂದಿರುವ "ಡ್ರೈನ್ ಎಕ್ಸ್ಪರ್ಟ್" ಗಳ ಜೊತೆ ಭೇಟಿಕೊಟ್ಟಿದ್ದೆ. pic.twitter.com/KlKkaE637u
— Pratap Simha (@mepratap) September 1, 2022