ದೆಹಲಿ: ಸ್ಥಳೀಯ ಬಿಜೆಪಿ ನಾಯಕ ಸುಖಬೀರ್ ಖತಾನಾ ಅವರನ್ನು ಬುಧವಾರ ಗುರಗಾಂವ್ನಲ್ಲಿನ ಬಟ್ಟೆ ಅಂಗಡಿಯೊಳಗೆ ಐವರು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.
ಸುಖಬೀರ್ ಪ್ರವೇಶಿಸುತ್ತಿದ್ದಂತೆಯೇ ಅಂಗಡಿಯೊಳಗಿದ್ದ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಸುಖಬೀರ್ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
Gurugram, Haryana: BJP worker Sukhbir Khatana gunned down in market where 4-5 unknown assailants shot him inside a showroom on Gurudwara road near Sadar Bazar. He was rushed to hospital where he succumbed to his injuries. Police investigating, CCTV being checked.
— ANI (@ANI) September 1, 2022
ಸುಖಬೀರ್ ಅವರು ಗುರಗಾಂವ್ನ ಸೊಹ್ನಾ ಮಾರುಕಟ್ಟೆ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿದ್ದರು ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ಗೆ ಆಪ್ತರಾಗಿದ್ದರು. ಅವರು ನಗರದ ಸಮೀಪದ ರಿಥೋಜ್ ಗ್ರಾಮದಿಂದ ಜಿಲ್ಲಾ ಪರಿಷತ್ ಚುನಾವಣೆಗೆ ಸಿದ್ಧತೆ ನಡೆಸಿದ್ದರು ಎಂದು ಸುದ್ದಿ ವರದಿಗಳು ತಿಳಿಸಿವೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
BIG NEWS: ಮುಂಬೈನಲ್ಲಿ ರಾಜ್ ಠಾಕ್ರೆ ಪಕ್ಷದ ಕಾರ್ಯಕರ್ತರಿಂದ ಮಹಿಳೆ ಮೇಲೆ ಹಲ್ಲೆ… ವಿಡಿಯೋ ವೈರಲ್