ಬೆಂಗಳೂರು : ಕ.ರಾ.ರ.ಸಾ.ನಿಗಮದಿಂದ ವಿತರಿಸಲಾಗುತ್ತಿರುವ ರಿಯಾಯಿತಿ ಪಾಸ್ ಆಧಾರಿತ ಪ್ರಯಾಣದ ಅವಧಿಯನ್ನು ಆಗಸ್ಟ್-22 ರಿಂದ ಅಕ್ಟೋಬರ್-22 ರ ಅಂತ್ಯದವರೆಗೆ ವಿಸ್ತರಿಸಲಾಗಿದ್ದು, ವಿದ್ಯಾರ್ಥಿಗಳಿಂದ ನಿಗಧಿತ ಮೊತ್ತವನ್ನು ಪಡೆದುಕೊಂಡು ರಶೀದಿ ನೀಡಿ ವಿದ್ಯಾರ್ಥಿಗಳು ರಶೀದಿ ಮತ್ತು ಹಳೆಯ ಪಾಸ್ ಎರಡನ್ನು ತೋರಿಸಿ ಅಕ್ಟೋಬರ್-22ರ ವರೆಗೆ ಪ್ರಯಾಣಿಸಲು ಅವಕಾಸ ನೀಡಲಾಗಿದೆ.
BIGG NEWS : ಕೆರೆಗಳಿಗೆ ಸ್ಲೂಯೀಸ್ ಗೇಟ್ ಅಳವಡಿಸಲು ತೀರ್ಮಾನ : ಸಿಎಂ ಬಸವರಾಜ ಬೊಮ್ಮಾಯಿ
ಅಂತಿಮ ವರ್ಷದ ಕೊನೆಯ ಸೆಮಿಸ್ಟರ್ನಲ್ಲಿ ಅಭ್ಯಸಿಸುತ್ತಿರುವ ಪದವಿ/ಸ್ನಾತಕೋತ್ತರ/ಡಿಪ್ಲೊಮಾ/ಕಾನೂನು ಇತರೆ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಪರೀಕ್ಷೆ ಮುಗಿಯುವವರಿಗೆ ಮಾತ್ರ ಅಂದರೆ ಅಕ್ಟೋಬರ್-22ರ ಅಂತ್ಯದವರೆಗೆ ಹಳೆಯ ಪಾಸನ್ನು ಹಾಗೂ ಅವಧಿ ವಿಸ್ತರಣೆ ಸಮಯಲದಲಿ ನೀಡಿರುವ ರಶೀದಿಯನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ. ಇನ್ನುಳಿದ ಇತರೆ ತರಗತಿ/ಸೆಮಿಸ್ಟರ್ನ ವಿದ್ಯಾರ್ಥಿಗಳು ಸೇವಾಸಿಂಧು ಪೊರ್ಟಲ್ನಲ್ಲಿ ಅರ್ಜಿ ಸಲ್ಲಿಸಿ ಹೊಸ ಪಾಸ್ಗಳನ್ನು ಶಿವಮೊಗ್ಗ ವಿಭಾಗದ ಬಸ್ ನಿಲ್ದಾಣಗಳ ಬಸ್ಪಾಸ್ ವಿತರಣಾ ಕೌಂಟರ್ಗಳಲ್ಲಿ ಪಡೆಯಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
BIGG NEWS : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಗುಡ್ ನ್ಯೂಸ್ : ಕರ್ನಾಟಕ ಗ್ರಾಮಪಂಚಾಯಿತಿಗಳಿಗೆ 628 ಕೋಟಿ ರೂ.ಬಿಡುಗಡೆ
ಕೊರೋನಾ ಕಾರಣದಿಂದಾಗಿ ಶಾಲಾ-ಕಾಲೇಜುಗಳ ತಡವಾಗಿ ಆರಂಭವಾಗಿರೋ ಕಾರಣದಿಂದಾಗಿ, ಪರೀಕ್ಷೆಗಳು ಕೂಡ ತಡವಾಗಿ ಆರಂಭಗೊಂಡಿವೆ. ಈ ಹಿನ್ನಲೆಯಲ್ಲಿ ಪದವಿ, ಸ್ನಾತಕೋತ್ತರ ಸೇರಿದಂತೆ ವಿವಿಧ ಕೋರ್ಸ್ ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗೋ ನಿಟ್ಟಿನಲ್ಲಿ, ಬಿಎಂಟಿಸಿಯು ( BMTC ) ಅಕ್ಟೋಬರ್ 31, 2022ರವರೆಗೆ ಬಿಎಂಟಿಸಿ ಬಸ್ ನಲ್ಲಿ ಉಟಿತವಾಗಿ ಸಂಚರಿಸೋದಕ್ಕೆ ಅವಕಾಶ ನೀಡಿದೆ.
ಈ ಕುರಿತಂತೆ ಬಿಎಂಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೋವಿಡ್-19 ಸಾಂಕ್ರಾಮಿಕದ ಕಾರಣ 2021-22 ನೇ ಸಾಲಿನ ಕಾಲೇಜಿನ ತರಗತಿಗಳು ತಡವಾಗಿ ಪ್ರಾರಂಭವಾಗಿದ್ದು ಅಂತಿಮ ಸೆಮಿಸ್ಟರ್ನ ಪದವಿ, ವೃತ್ತಿಪರ, ಸ್ನಾತಕೋತ್ತರ ಮತ್ತು ತಾಂತ್ರಿಕ ಹಾಗೂ ವೈಧ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಗಳು ಸೆಪ್ಟೆಂಬರ್-2022 ಮತ್ತು ಅಕ್ಟೋಬರ್ – 2022 ರ ಮಾಹೆಯಲ್ಲಿ ಇರುತ್ತವೆ ಎಂದು ತಿಳಿಸಿದೆ.
ತತ್ಸಂಬಂಧ, ಸದರಿ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿಯುವವರೆಗೂ ಸಂಸ್ಥೆಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಸಲುವಾಗಿ, 2021-22 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸಿನೊಂದಿಗೆ ಅಂತಿಮ ವರ್ಷದ/ಸೆಮಿಸ್ಟರ್ನ ಪದವಿ, ವೃತ್ತಿಪರ, ಸ್ನಾತಕೋತ್ತರ ಮತ್ತು ತಾಂತ್ರಿಕ ಹಾಗೂ ವೈಧ್ಯಕೀಯ ವಿದ್ಯಾರ್ಥಿಗಳು ದಿನಾಂಕ 31.10.2022 ರವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದೆ.