ಬೆಂಗಳೂರು: ಕೆರೆಗಳ ಒತ್ತುವರಿ ತೆರವುಗೊಳಿಸಿ ಬೊಮ್ಮನಹಳ್ಳಿ, ಮಹದೇವಪುರ, ಕೆ.ಆರ್.ಪುರಂ ಅಥವಾ ಎತ್ತರದ ಪ್ರದೇಶದಲ್ಲಿ ಅತಿ ಹೆಚ್ಚು ಕೆರೆಗಳಿದ್ದು, ಒಂದಕ್ಕೊಂದು ಹೊಂದಿಕೊಂಡಿರುವ ಕೆರೆಗಳಿಗೆ ಸ್ಲೂಯೀಸ್ ಗೇಟ್ ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂಜಿನ್ನಲ್ಲಿ ವೈಬ್ರೇಷನ್: ಉದಯಪುರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್| IndiGo
ಅವರು ಗುರುವಾರ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮಳೆ ನೀರು ಚರಂಡಿಗಳ ನಿರ್ವಹಣೆಗೆ ಕೈಪಿಡಿ
ತೆರೆವುಗೊಳಿಸುವ ಕಾರ್ಯ ನಿರಂತರವಾಗಿ ಆಗಬೇಕು. ತಗ್ಗು ಪ್ರದೇಶದಲ್ಲಿ ನೀರು ಹೋಗಲು ದಾರಿ ಇಲ್ಲ. ಮನೆಗಳನ್ನು ಕಟ್ಟಲು ಅವಕಾಶ ನೀಡಿದವರ್ಯಾರು? ಇದಕ್ಕೆಲ್ಲಾ ಯಾರು ಕಾರಣ ಎಂದು ಪ್ರಶ್ನಿಸಿದರು. ಒತ್ತುವರಿ ತೆರೆವುಗೊಳಿಸುವುದಲ್ಲದೆ ಅಂದಾಜು ಪಟ್ಟಿ ಸಿದ್ಧಪಡಿಸಿ. ಎಲ್ಲವನ್ನೂ ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ, ನೀರು ಸರಳವಾಗಿ ಹರಿದುಹೋಗುವ ರೀತಿಯಲ್ಲಿ ಮಾಡಬೇಕು.ಒತ್ತುವರಿ ಆಗಿರುವುದನ್ನು ತೆಗೆಸಿ, ಖಾಸಗಿ ಜಮೀನು ಲಭ್ಯವಿದೆ, ನಕ್ಷೆಯಲ್ಲಿದ್ದರೆ ಪರಿಹಾರವನ್ನು ನೀಡಬೇಕಾದರೆ ನೀಡಲು ಸಿದ್ದವಿರುವುದಾಗಿ ತಿಳಿಸಿದರು. ಸಂಪೂರ್ಣವಾಗಿ ಆರ್.ಸಿ.ಸಿ ಕಟ್ಟಡವನ್ನು ಕಟ್ಟಿ. 30.ಮೀಟರ್ ಚರಂಡಿ ಮೂರು ಮೀಟರ್ ಗೆ ಇಳಿದಿದೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಎತ್ತರದ ಗೋಡೆ ಕಟ್ಟಿ ಎಂದು ಸೂಚಿಸಿದರು.
BIGG NEWS : ಇಂದು ಮಂಗಳೂರಿಗೆ ಪ್ರಧಾನಿ ಮೋದಿ : 3,800 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ
ಎಲ್ಲಾ ಸ್ಥಳಗಳಲ್ಲಿಯೂ ಇದೇ ಸಮಸ್ಯೆ ಇದೆ.ಕೆರೆಯಿಂದ ಮತ್ತೊಂದು ಕೆರೆಗೆ ಬರುವುದರಿಂದ ಹಿಡಿದು ವರ್ತೂರು ಕೆರೆ, ಅಲ್ಲಿಂದ ದಕ್ಷಿಣ ಪಿನಾಕಿನಿಗೆ ಸೇರುವ ಎಲ್ಲ ಕಾಲುವೆಗಳ ಶಾಶ್ವತ ಕಟ್ಟಡಗಳನ್ನು ಮಾಡಬೇಕು. ಸ್ಲೂಯಿಸ್ ಗೇಟ್ ಹಾಕಿದ ಮೇಲೆ ಬೇಸಿಗೆ ಕಾಲದಲ್ಲಿ ಎಲ್ಲಾ ಕೆರೆಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಬೇಕು. ವಲಯವಾರು ಮಳೆ ನೀರು ಚರಂಡಿಗಳ ನಿರ್ವಹಣೆಗೆ ಕೈಪಿಡಿ ಮಾಡಬೇಕು. ಈಗಾಗಲೇ ಈ ಉದ್ದೇಶಕ್ಕಾಗಿ 1500 ಕೋಟಿ ನೀಡಲಾಗಿದೆ. ಟೆಂಡರ್ ಆಗಿದೆ. ಅವಶ್ಯಕತೆ ಇದ್ದರೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.
BIGG BREAKING NEWS : ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಜೈಲು ಪಾಲು : ಶ್ರೀಗಳಿಗೆ 14 ದಿನ ನ್ಯಾಯಾಂಗ ಬಂಧನ
ಉತ್ತರದಾಯಿತ್ವ ಬಹಳ ಮುಖ್ಯ
ಮಳೆ ನೀರು ಚರಂಡಿಯ ನಿರ್ವಹಣೆಗೆ ಮಾಡುವ ಅಂದಾಜು ಪಟ್ಟಿಯಂತೆ ಅನುದಾನವನ್ನು ಇದೇ ವರ್ಷ ಒದಗಿಸಲಾಗುವುದು ಎಂದರು. ಇದು ನಮ್ಮ ಆದ್ಯತೆ. ಆದರೆ ಉತ್ತರದಾಯಿತ್ವ ಬಹಳ ಮುಖ್ಯ. ಇದರಲ್ಲಿ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದರು. ಹಿಂದಿನ ಎಲ್ಲಾ ಕಾಮಗಾರಿಗಳ ಸಂಪೂರ್ಣ ತನಿಖೆಗೆ ಆದೇಶ ಮಾಡುತ್ತೇನೆ. ಸತ್ಯ ಹೊರಗೆ ಬರಲಿ ಎಂದರು.
ಇಲಾಖೆಗಳ ಮಧ್ಯೆ ಸಮನ್ವಯತೆ ಅಗತ್ಯ
ಬೆಂಗಳೂರು ಜಲ ಮಂಡಳಿ, ಬಿಬಿಎಂಪಿ ಕೆಲವೆಡೆ ಬಿಡಿಎ ಹಾಗೂ ಬೆಸ್ಕಾಂಗಳ ಮಧ್ಯೆ ಸಮನ್ವಯದ ಅವಶ್ಯಕತೆ ಇದೆ. ಬೇಜವಾಬ್ದಾರಿ ಯಿಂದ ನಾಲ್ಕು ಸಂಸ್ಥೆಗಳು ನಡೆದುಕೊಳ್ಳಬಾರದು. ಬೆಂಗಳೂರು ಜಲ ಮಂಡಳಿ ಒಳಚರಂಡಿ ಘಟಕಗಳನ್ನು ಸುಸ್ಥಿತಿಯಲ್ಲಿ ಇರುವಂತೆ ಮಾಡಬೇಕು. ಇದಕ್ಕೆ ಕಾಲಮಿತಿ ಹಾಕಿಕೊಳ್ಳಬೇಕು. 2015- 16 ರಲ್ಲಿ ಸ್ಥಾಪಿಸಿದ ಘಟಕಗಳು ಕೆಲಸ ಮಾಡುತ್ತಿಲ್ಲ. ಪೂರ್ಣ ಸಾಮರ್ಥ್ಯದಲ್ಲಿ ಅವು ಕೆಲಸ ಮಾಡುತ್ತಿಲ್ಲ. ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಬೇಕು. ಬೆಸ್ಕಾಂ ನವರು ಯಾವುದೇ ಕೆಲಸ ಮಾಡಿದರೂ ಅದನ್ನು ಪೂರ್ಣಗೊಳಿಸಬೇಕು. ಮಳೆ ನೀರು ಚರಂಡಿ ಸಮಸ್ಯೆ ಪೂರ್ಣ ನಿಲ್ಲಬೇಕು. ಐಟಿ ಬಿಟಿ ಸಂಸ್ಥೆಗಳು ಇಲ್ಲಿವೆ. ಬೆಂಗಳೂರಿನ ವರ್ಚಸ್ಸು ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಕೆ.ಆರ್.ಪುರಂ, ಹೆಚ್.ಎಸ್.ಆರ್ ಬಡಾವಣೆ, ಮಾರತ್ತಹಳ್ಳಿ,ವೈಟ್ ಫೀಲ್ಡ್, ಕೋರಮಂಗಲ, ಈ ಎಲ್ಲ ಪ್ರದೇಶಗಳಲ್ಲಿ ಮಳೆ ನೀರು ಚರಂಡಿ ಹಾಗೂ ರಸ್ತೆಗಳನ್ನು ಸರಿಪಡಿಸಬೇಕು ಎಂದರು.