ಬೆಂಗಳೂರು: 15 ಸಾವಿರ ಶಿಕ್ಷಕರ ಹುದ್ದೆಯ ನೇಮಕಾತಿಯಲ್ಲಿ ( Teacher Recruitment 2022 ) ಆಯ್ಕೆಯಾಗದೇ ಇನ್ನೂ 3,500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಲ್ಲದೇ ಬಾಕಿ ಉಳಿಯಲಿವೆ ಎನ್ನಲಾಗುತ್ತಿದೆ. ಆ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತ್ರ ಬಾಕಿ ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಶಿಕ್ಷಕರ ಹುದ್ದೆ ( Teacher Jobs ) ನಿರೀಕ್ಷೆಯಲ್ಲಿದ್ದಂತವರಿಗೆ ಮತ್ತೆ ಟಿಇಟಿ ಪರೀಕ್ಷೆಗೆ ( KAR TET Exam-2022 ) ಅರ್ಜಿಯನ್ನು ಆಹ್ವಾನಿಸಲಾಗಿದೆ.
BIGG BREAKING NEWS : ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಜೈಲು ಪಾಲು : ಶ್ರೀಗಳಿಗೆ 14 ದಿನ ನ್ಯಾಯಾಂಗ ಬಂಧನ
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಾಹಿತಿ ನೀಡಿದ್ದು, 2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( KAR-TET 2022)ಕ್ಕೆ ಇಲಾಖೆಯ ವೆಬ್ ಸೈಟ್ www.schooleducation.kar.nic.in ಜಾಲತಾಣದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಟಿಇಟಿ-2022ರ ಪರೀಕ್ಷೆಗೆ ( KARTET-2022 Exam ) ಆನ್ ಲೈನ್ ( Online ) ಮೂಲಕ ಅರ್ಜಿಯನ್ನು ದಿನಾಂಕ 01-09-2022ರಿಂದ 30-09-2022ರವರೆಗೆ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ, ವಯೋಮಿತಿ ಸೇರಿದಂತೆ ವಿವಿಧ ಮಾಹಿತಿಗಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಸೂಚಿಸಿದೆ.
ವರದಿ : ವಸಂತ ಬಿ ಈಶ್ವರಗೆರೆ