ನವದೆಹಲಿ : ಇತ್ತೀಚೆಗೆ, ಕ್ರಿಪ್ಟೋ ಮೈನಿಂಗ್ ಮಾಲ್ವೇರ್ ಸಾವಿರಾರು ಕಂಪ್ಯೂಟರ್ಗಳಲ್ಲಿ ತನ್ನ ಮನೆಯನ್ನ ಮಾಡಿದೆ. ದೊಡ್ಡ ವಿಷಯವೆಂದ್ರೆ ಈ ವೈರಸ್ ಗೂಗಲ್ ಟ್ರಾನ್ಸ್ಲೇಶನ್ ಅಪ್ಲಿಕೇಶನ್ ರೂಪದಲ್ಲಿತ್ತು. ಚೆಕ್ ಪಾಯಿಂಟ್ ರಿಸರ್ಚ್ (CPR) ನಡೆಸಿದ ಅಧ್ಯಯನದ ಪ್ರಕಾರ, “ನಿಟೊಕೋಡ್” ಎಂದು ಕರೆಯಲಾಗುವ ಈ ಮಾಲ್ವೇರ್ʼನ್ನ ಟರ್ಕಿ ಕಂಪನಿಯು ಗೂಗಲ್ ಟ್ರಾಸ್ಲೇಟ್ನ ಡೆಸ್ಕ್ಟಾಪ್ ಅಪ್ಲಿಕೇಶನ್ ಆಗಿ ಅಭಿವೃದ್ಧಿಪಡಿಸಿದೆ.
ಗೂಗಲ್ ತನ್ನ ಅನುವಾದ ಸೇವೆಗಾಗಿ ಇನ್ನೂ ಪ್ರತ್ಯೇಕ ಅಪ್ಲಿಕೇಶನ್ʼನ್ನ ಅಭಿವೃದ್ಧಿಪಡಿಸದ ಕಾರಣ, ಅನೇಕ ಗೂಗಲ್ ಬಳಕೆದಾರರು ಈ ಅಪ್ಲಿಕೇಶನ್ ಅನುವಾದಕ್ಕಾಗಿ ತಮ್ಮ ಕಂಪ್ಯೂಟರ್ಗಳಲ್ಲಿ ಡೌನ್ಲೋಡ್ ಮಾಡಿದ್ದಾರೆ. ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತ್ರ, ಅದು ಸೋಂಕಿತ ಸಾಧನದಲ್ಲಿ ದೊಡ್ಡ ಕ್ರಿಪ್ಟೋ ಮೈನಿಂಗ್ ಆಪರೇಷನ್ ಸೆಟ್-ಅಪ್ʼನ್ನ ರಚಿಸುತ್ತದೆ.
ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ, ಈ ವೈರಸ್ ಕಂಪ್ಯೂಟರ್ನಲ್ಲಿ ಶೆಡ್ಯೂಲ್ ಟಾಸ್ಕ್ ಮೆಕ್ಯಾನಿಸಂ ಮೂಲಕ ಅನುಸ್ಥಾಪನಾ ಪ್ರಕ್ರಿಯೆಯನ್ನ ಪ್ರಾರಂಭಿಸುತ್ತದೆ. ನಂತ್ರ ಇದು ಅಪಾಯಕಾರಿ ಮಾಲ್ವೇರ್ ಮೊನೆರೊ ಕ್ರಿಪ್ಟೋಕರೆನ್ಸಿಯನ್ನ ಗಣಿಗಾರಿಕೆ ಮಾಡಲು ಒಂದು ಸೆಟಪ್ ಸಿದ್ಧಪಡಿಸುತ್ತದೆ. ಇದರ ಪರಿಣಾಮವಾಗಿ, ಇದು ಅಭಿಯಾನವನ್ನ ನಡೆಸುತ್ತಿರುವವರಿಗೆ ನಿಯಂತ್ರಣವನ್ನ ಒದಗಿಸುತ್ತದೆ ಮತ್ತು ಸೋಂಕಿತ ಕಂಪ್ಯೂಟರ್ಗೆ ಸ್ಕ್ಯಾಮ್ ಬಳಕೆದಾರರಿಗೆ ಪ್ರವೇಶವನ್ನ ನೀಡುತ್ತದೆ. ಕಂಪ್ಯೂಟರ್ ಬಳಕೆದಾರನಿಗೆ ಈ ಪ್ರವೇಶದ ಬಗ್ಗೆ ಸ್ವಲ್ಪವೂ ತಿಳಿದಿಲ್ಲ. ನಂತ್ರ ಅದು ವ್ಯವಸ್ಥೆಯನ್ನು ನಾಶಪಡಿಸುತ್ತದೆ.
ನೀವು Google Translate ಅನ್ನು ಹುಡುಕಿದಾಗ ವೈರಸ್ ಕಂಡುಬರುತ್ತದೆ.!
ಮಾಲ್ವೇರ್ʼನ್ನ ಕಾರ್ಯಗತಗೊಳಿಸಿದ ನಂತ್ರ ಅದು ಸಿ & ಸಿ ಸರ್ವರ್ಗೆ ಸಂಪರ್ಕಿಸುತ್ತದೆ ಮತ್ತು XMRIg ಕ್ರಿಪ್ಟೋ ಮೈನರ್ʼನ್ನ ಕಾನ್ಫಿಗರ್ ಮಾಡಿದ ನಂತ್ರ ಗಣಿಗಾರಿಕೆಯನ್ನ ಪ್ರಾರಂಭಿಸುತ್ತದೆ ಎಂದು ಸಿಪಿಆರ್ ವರದಿ ಹೇಳುತ್ತದೆ. ಈ ಸಾಫ್ಟ್ ವೇರ್ʼನ್ನ ಗೂಗಲ್ʼನಲ್ಲಿ ಸುಲಭವಾಗಿ ಹುಡುಕಬಹುದು. “Google Translate Desktop Download” ಗಾಗಿ ಹುಡುಕಿದ್ರೆ ಸಾಫ್ಟ್ ವೇರ್ ಕಾಣಿಸಿಕೊಳ್ಳುತ್ತದೆ. ಈ ಅಪ್ಲಿಕೇಶನ್ʼನಲ್ಲಿ ಟ್ರೋಜನ್ ಸೇರಿಸಲಾಗಿದೆ.
11 ದೇಶಗಳಲ್ಲಿ ಕಂಪ್ಯೂಟರ್ʼಗಳ ಮೇಲೆ ದಾಳಿ.!
ಈ “ನಿಟೊಕೋಡ್” ಮಾಲ್ವೇರ್ ಕನಿಷ್ಠ 11 ದೇಶಗಳ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಮಾಲ್ವೇರ್ 2019ರಿಂದ ಹರಿದಾಡುತ್ತಿದೆ. ಸಿಪಿಆರ್ ಕ್ರಿಪ್ಟೋ ಗಣಿಗಾರಿಕೆ ಅಭಿಯಾನಗಳ ಬಗ್ಗೆ ಟ್ವಿಟರ್ʼಗೆ ಎಚ್ಚರಿಕೆಗಳು ಮತ್ತು ನವೀಕರಣಗಳನ್ನು ಕಳುಹಿಸುತ್ತಲೇ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ಇಂತಹ ದಾಳಿಗಳು ಹೆಚ್ಚಾಗಿವೆ..!
ಅಂತಹ ವೈರಸ್ ದಾಳಿಗಳು ಈಗ ಸಾಮಾನ್ಯವಾಗುತ್ತಿವೆ. ವೈರಸ್ʼಗಳಿರುವ ಅಪ್ಲಿಕೇಶನ್ʼಗಳನ್ನ Google Playನಿಂದ ಹೇಗೆ ತೆಗೆದುಹಾಕಲಾಗಿದೆ ಅನ್ನೋದನ್ನ ಸಹ ನೀವು ನೋಡಿರಬಹುದು. ಜ್ಸ್ಕಲರ್ ಥ್ರೆಟ್ಲ್ಯಾಬ್ಜ್ ಪ್ರಕಾರ, ಜೋಕರ್ ಮಾಲ್ವೇರ್ ಈ ವರ್ಷದ ಆರಂಭದಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ 50 ಅಪ್ಲಿಕೇಶನ್ಗಳನ್ನ ಸೋಂಕಿಗೆ ಒಳಪಡಿಸಿದೆ. ಗೂಗಲ್ ಈ ಎಲ್ಲಾ ಅಪ್ಲಿಕೇಶನ್ಗಳನ್ನ ಪ್ಲೇ ಸ್ಟೋರ್ನಿಂದ ತೆಗೆದು ಹಾಕಬೇಕಾಗಿತ್ತು. ಜೋಕರ್, ಫೇಸ್ ಸ್ಟೀಲರ್ ಮತ್ತು ಕೋಪರ್ ಮಾಲ್ವೇರ್ ಅಪ್ಲಿಕೇಶನ್ಗಳ ಮೂಲಕ ಜನರ ಸಾಧನಗಳನ್ನ ತಲುಪುತ್ತಿದ್ದರು ಎಂದು ಝ್ಸ್ಕಲರ್ ತಂಡದವರು ತಿಳಿಸಿದ್ದಾರೆ. ಇವುಗಳಲ್ಲಿ ಇವೆಲ್ಲವೂ ಕಂಡುಬಂದಾಗ, ಗೂಗಲ್ ಅವುಗಳನ್ನ ಸ್ಟೋರ್ನಿಂದ ಅಳಿಸಲಾಯ್ತು.