ಧಾರವಾಡ : ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ ಉಚಿತವಾಗಿ ಆಯುಷ್ಕಾನ್ ಭಾರತ ಹೆಲ್ತ್ ಕಾರ್ಡ್ಗಳನ್ನು ಪಡೆದುಕೊಳ್ಳಬಹುದು. ಆಯುಷ್ಮಾನ್ ಭಾರತ ಹೆಲ್ತ್ ಕಾರ್ಡ್ ಹೊಂದಿದವರು ಆಯ್ದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಬಿ.ಪಿ.ಎಲ್.ಕಾರ್ಡ ಹೊಂದಿದವರಿಗೆ 5 ಲಕ್ಷ ರೂ.ವರೆಗೆ ಮತ್ತು ಎ.ಪಿ.ಎಲ್. ಕಾರ್ಡ ಹೊಂದಿದವರಿಗೆ 1.5 ಲಕ್ಷ ರೂ.ಗಳವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆ ಅನುμÁ್ಠನಗೊಂಡಿರುತ್ತದೆ. ಭಾರತ ಸರ್ಕಾರವು ಸಾರ್ವಜನಿಕ ಆರೋಗ್ಯದ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ ಒಬ್ಬ ವ್ಯಕ್ತಿಯ ಸಂಪೂರ್ಣ ಆರೋಗ್ಯದ ಮಾಹಿತಿಯನ್ನು ಒಂದೇ ಸೂರಿನಡಿ ದೊರಕಿಸಿ, ಆರೋಗ್ಯದ ಸೌಲಭ್ಯಗಳು ಸುಲಭವಾಗಿ ದೊರಕುವಂತೆ ಮಾಡುವ ಮಹತ್ತರ ಯೋಜನೆಯಾದ ಆಯುಷ್ಮಾನ್ ಭಾರತ ಹೆಲ್ತ್ ಆಕೌಂಟ್ ಕಾರ್ಡ್ ಯೋಜನೆಯನ್ನು ಆರಂಭಿಸಿರುತ್ತದೆ.
BIGG BREAKING NEWS: ಕಾಂಗ್ರೆಸ್ ಗೆ ಬಿಗ್ ಶಾಕ್; ಮಾಜಿ ಸಂಸದ ಮುದ್ದಹನುಮೇಗೌಡ ಗುಡ್ ಬೈ
ಚಿಕಿತ್ಸೆ ಮಾಹಿತಿಯೂ ಸಹ ದೇಶದ ಯಾವುದೇ ಭಾಗದಲ್ಲಿ ಆನ್ಲೈನ್ ಮೂಲಕ ಪಡೆಯಬಹುದಾಗಿರುತ್ತದೆ. ಕಾರ್ಡ್ನ ನೊಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಹತ್ತಿರದ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ, ಉಚಿತವಾಗಿ ಆಯುಷ್ಕಾನ್ ಭಾರತ ಹೆಲ್ತ್ ಕಾರ್ಡಗಳನ್ನು ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಝೈದ್ ಖಾನ್ ಚೊಚ್ಚಲ ಸಿನಿಮಾ ಎಂಟ್ರಿಗೆ ಮುಹೂರ್ತ ಫಿಕ್ಸ್…ನವೆಂಬರ್ 4ರಂದು ತೆರೆಯಲ್ಲಿ ಬನಾರಸ್ ಅನಾವರಣ