ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದ್ದು, ನಗರ ಪ್ರದೇಶಗಳ ಮಾದರಿಯಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲೂ ಕುಡಿಯುವ ನೀರಿಗೆ ಶುಲ್ಕ ಹಾಗೂ ಖಾಲಿ ಜಾಗಕ್ಕೆ ತೆರಿಗೆ ಸೇರಿದಂತೆ ಹಲವು ಶುಲ್ಕಗಳನ್ನು ವಿಧಿಸಲು ನಿರ್ಧರಿಸಿದೆ.
BIGG NEWS : ತಮಿಳುನಾಡಿನಲ್ಲಿ ಭಾರೀ ಮಳೆಯ ಆರ್ಭಟ : 4 ಜಿಲ್ಲೆಗಳಲ್ಲಿ ‘ ಶಾಲಾ-ಕಾಲೇಜುಗಳಿಗೆ ರಜೆ ‘ ಘೋಷಣೆ
ರಾಜ್ಯ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮ 2021ರ ಕರಡನ್ನು ಪ್ರಕಟಿಸಿದ್ದು, ಈ ಕರಡಿನಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಖಾಲಿ ಜಾಗಕ್ಕೆ ತೆರಿಗೆ ಸೇರಿದಂತೆ ಹಲವು ಶುಲ್ಕಗಳನ್ನು ವಿಧಿಸಲು ಮುಂದಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ರಾಜ್ಯ ಸರ್ಕಾರ ಪ್ರಕಟಿಸಿರುವ ಕರಡಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಶುಲ್ಕ ವಿಧಿಸುವ ಪ್ರಸ್ತಾಪವಿದೆ. ಈ ಶುಲ್ಕವನ್ನು ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ನಿಗದಿ ಮಾಡಲಿದೆ. ಜೊತೆಗೆ ಕುಡಿಯುವ ನೀರಿನ ಹೊಸ ಸಂಪರ್ಕ ಪಡೆಯಲು ವಸತಿ ಕಟ್ಟಡಗಳಿಗೆ 2 ಸಾವಿರ ರೂ. ವಾಣಿಜ್ಯ ವಸತಿಯೇತರ ಕಟ್ಟಡಗಳಿಗೆ 3 ಸಾವಿರ ರೂ. ಶುಲ್ಕ ವಿಧಿಸುವ ಪ್ರಸ್ತಾಪ ಮಾಡಲಾಗಿದೆ.
ಗ್ರಾಮ ಪಂಚಾಯಿತಿಗಳು ಈ ವರೆಗೆ ಮನೆ ತೆರಿಗೆ ಮಾತ್ರ ಸಂಗ್ರಹಿಸುತ್ತಿತ್ತು. ಆದರೆ ಉದ್ದೇಶಿತ ಕರಡು ಪ್ರತಿಯಲ್ಲಿ ವಸತಿ, ವಾಣಿಜ್ಯ ಮತ್ತು ಕೈಗಾರಿಕೆ ಕಟ್ಟಡಗಳ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪ ಇದೆ. ಜತೆಗೆ ಖಾಲಿ ಜಮೀನಿನ ಮೇಲೆ, ವಸತಿಯೇತರ ಕಟ್ಟಡ ಹಾಗೂ ಖಾಲಿ ಜಾಗಗಳ ಮೇಲೆ ಅಥವಾ ಅವರೆಡರ ಮೇಲೆ, ಭೂ ಪರಿವರ್ತಿತ ಖಾಲಿ ಜಮೀನಿನ ಮೇಲೆ ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ. ಇದರ ಜತೆ ಜತೆಗೆ ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಕರಡು ಪ್ರತಿಯಲ್ಲಿ ಉಲ್ಲೇಖ ಇದೆ.