ಬೆಂಗಳೂರು : ಕೆಂಪೇಗೌಡರು ಬೆಂಗಳೂರನ್ನು ಒಂದು ಸಮುದಾಯದ ಆಸ್ತಿಯನ್ನಾಗಿ ಮಾಡದೆ ಸರ್ವ ಧರ್ಮೀಯರು ಇಲ್ಲಿ ಶಾಂತಿ, ನೆಮ್ಮದಿಯಿಂದ ಬಾಳುವಂಥಹ ವಾತಾವರಣ ನಿರ್ಮಾಣ ಮಾಡಿ ಹೋಗಿದ್ದಾರೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
BIGG NEWS : ತಮಿಳುನಾಡಿನಲ್ಲಿ ಭಾರೀ ಮಳೆಯ ಆರ್ಭಟ : 4 ಜಿಲ್ಲೆಗಳಲ್ಲಿ ‘ ಶಾಲಾ-ಕಾಲೇಜುಗಳಿಗೆ ರಜೆ ‘ ಘೋಷಣೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು
BIGG NEWS : ತಮಿಳುನಾಡಿನಲ್ಲಿ ಭಾರೀ ಮಳೆಯ ಆರ್ಭಟ : 4 ಜಿಲ್ಲೆಗಳಲ್ಲಿ ‘ ಶಾಲಾ-ಕಾಲೇಜುಗಳಿಗೆ ರಜೆ ‘ ಘೋಷಣೆ
ಕೆಂಪೇಗೌಡರು ಒಂದು ಸಮುದಾಯಕ್ಕೆ ಮಾಡಿ ಬಿಟ್ಟು ಹೋಗಿಲ್ಲ.ಇಲ್ಲಿ ವಾಸವಾಗಿರೋ ಜನರಿಗೆ ಕೆರೆ, ಕಟ್ಟೆ ನಿರ್ಮಾಣ ಮಾಡಿದ್ದು, ಅದರ ಪ್ರತಿಫಲವನ್ನು ನಾವೆಲ್ಲರೂ ಪಡೆದುಕೊಳ್ಳುತ್ತೀದ್ದೇವೆ ಎಂದರು.
ಅವರವರ ಕುಲಕಸುಬು ಮಾಡುವವರಿಗೆ ಅನುಕೂಲ ಮಾಡಿಕೊಡಲಾಗಿದೆ. ಕುಲ ಕಸುಬು ಮಾಡುವವರಿಗೆ ಪ್ರತ್ಯೇಕ ಜಾಗ ಮಾಡಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.
BIGG NEWS : ತಮಿಳುನಾಡಿನಲ್ಲಿ ಭಾರೀ ಮಳೆಯ ಆರ್ಭಟ : 4 ಜಿಲ್ಲೆಗಳಲ್ಲಿ ‘ ಶಾಲಾ-ಕಾಲೇಜುಗಳಿಗೆ ರಜೆ ‘ ಘೋಷಣೆ
ಕೆಂಪೇಗೌಡರ ಪ್ರತಿಮೆ ಇಲ್ಲಿ ಆಗಬೇಕು ಎಂದು ಮಾಡಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಒಳ್ಳೆಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ನಮ್ಮ ಸರ್ಕಾರ ಈ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.
ನಮ್ಮ ಸರ್ಕಾರ ಕೆಂಪೇಗೌಡರ ಹೆಸರು ಉಳಿಸುವ ಕೆಲಸ ಮಾಡುತ್ತಿದೆ. ಸಿಎಂ ಅವರ ದೂರ ದೃಷ್ಟಿ ಇದಕ್ಕೆ ಸಾಕ್ಷಿ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು.
BIGG NEWS : ತಮಿಳುನಾಡಿನಲ್ಲಿ ಭಾರೀ ಮಳೆಯ ಆರ್ಭಟ : 4 ಜಿಲ್ಲೆಗಳಲ್ಲಿ ‘ ಶಾಲಾ-ಕಾಲೇಜುಗಳಿಗೆ ರಜೆ ‘ ಘೋಷಣೆ