ದುಮ್ಕಾ (ಜಾರ್ಖಂಡ್): ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದರಿಂದ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆಕ್ರೋಶಗೊಂಡು ತಮ್ಮ ಶಿಕ್ಷಕರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮುಖ್ಯೋಪಾಧ್ಯಾಯರ ಸೂಚನೆ ಮೇರೆಗೆ ಶಿಕ್ಷಕರನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ಶಿಕ್ಷಕ ಸುಮನ್ ಕುಮಾರ್ ಮತ್ತು ಗುಮಾಸ್ತ ಸೋನೆರಾಮ್ ಚೌರೆ ದೂರಿದ್ದಾರೆ. ಮುಖ್ಯೋಪಾಧ್ಯಾಯರು ಮತ್ತು 11 ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ದುಮ್ಕಾದ ಗೋಪಿಕಂದರ್ ಪಿಎಸ್ ಪ್ರಭಾರಿ ನಿತ್ಯಾನಂದ ಭೋಕ್ತ ತಿಳಿಸಿದ್ದಾರೆ.
In #Jharkhand’s Dumka district, a group of school students tied their teachers to a tree and allegedly beat them up for giving them low scores which resulted in the students failing their exams. pic.twitter.com/vdr1Amubp4
— Samira Nabila (@SamiraNabila1) August 31, 2022
ಘಟನೆ ವರದಿಯಾದ ನಂತರ ದುಮ್ಕಾ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲಿಸಿದ್ದಾರೆ. ಈ ವೇಳೆ, ಶಿಕ್ಷಕರು ನಮಗೆ ಪ್ರಾಯೋಗಿಕವಾಗಿ ಕಡಿಮೆ ಅಂಕಗಳನ್ನು ನೀಡಿದ್ದಾರೆ. ಈ ಬಗ್ಗೆ ಕೇಳಿದ್ರೆ ಅವರು ಯಾವುದೇ ವಿವರಣೆ ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
BIGG NEWS: 1890ರ ನಂತರ ಆಗಸ್ಟ್ ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ: ಐಎಂಡಿ
BIG NEWS: ಸೋವಿಯತ್ ಒಕ್ಕೂಟದ ಮಾಜಿ ಅಧ್ಯಕ್ಷ ʻಮಿಖಾಯಿಲ್ ಗೋರ್ಬಚೇವ್ʼ ನಿಧನಕ್ಕೆ ಸಂತಾಪ ಸೂಚಿಸಿದ ʻಪ್ರಧಾನಿ ಮೋದಿʼ
BIGG NEWS: 1890ರ ನಂತರ ಆಗಸ್ಟ್ ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ: ಐಎಂಡಿ