ಹಾವೇರಿ : ಜಿಲ್ಲೆಯ ಹಾನಗಲ್ನಲ್ಲಿ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದ ಖದೀಮರಿಂದ 85 ಲಕ್ಷ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅಕ್ರಮವಾಗಿ ಹಣವನ್ನು ಸಾಗಾಣಿಕೆ ಮಾಡುತ್ತಿದ್ದ ಖದೀಮರು ಪೊಲೀಸರನ್ನು ಕಂಡು ಕಾರನ್ನು ಸ್ಪೀಡ್ ಆಗಿ ಓಡಿಸಿದ್ದಾರೆ. ಬಳಿಕ ಕಾರ್ ಹಿಂದೆ ಓಡಿ ಹೋಗಿ ಕೆಳಕ್ಕೆ ಬಿದ್ದರೂ ಅವರನ್ನು ಬಿಡದೇ ಪೊಲೀಸರು ಚೇಜ್ ಮಾಡಿ, ಕಾರನ್ನು ನಿಲ್ಲಿಸಿದ್ದಾರೆ.
ಆರೋಪಿಗಳಾದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜಖಾನ್(31), ಇಮ್ರಾನ್ ಖಾನ್(27) ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್(23) ಮತ್ತು ಸಯ್ಯದ ಅಮೀನ್(29)ನನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಕಾರಿನ ಬ್ಯಾಗಿನಲ್ಲಿ ತುಂಬಿಟ್ಟ 500, 200, 100 ಹಾಗೂ 50 ರೂ. ಮುಖಬೆಲೆಯ ಒಟ್ಟು 85 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಆರೋಪಿಗಳಾದ
ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪಿಗಳನ್ನು ಹಿಡಿಯಲು ಹಾನಗಲ್ ಸಿಪಿಐ ಶಿವಶಂಕರ್ ಗಣಾಚಾರಿ ಹಾಗೂ ಪಿಎಸ್ಐ ಶ್ರೀಶೈಲ ಪಟ್ಟಣ ಶೆಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಎಸ್ಪಿ ಹನುಮಂತರಾಯ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ.