ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ʻಇಂದಿನಿಂದ ದೇಶದ ಮೊದಲ ವರ್ಚುಯಲ್ ಶಾಲೆ ಆರಂಭವಾಗೋದು ಕ್ರಾಂತಿಕಾರಿ ನಡೆʼ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ
ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ದೆಹಲಿಯಲ್ಲಿ ಅನೇಕ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ಕಡೆ ಶಾಲೆಗಳಲ್ಲಿ ಮೂಲಸೌಕರ್ಯಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ.
ಶಾಲಾ ಪಠ್ಯದಲ್ಲಿ ಕೌಶಲ್ಯ ತರಬೇತಿ ಸೇರಿದಂತೆ ಅನೇಕ ಹೊಸ ಹೊಸ ವಿಚಾರಗಳನ್ನು ಪರಿಚಯಿಸಲಾಗಿದೆ ಎಂದರು. ಇಂದು ನಾವು ದೇಶದ ಮೊದಲ ವರ್ಚುವಲ್ ಶಾಲೆ- ದೆಹಲಿ ಮಾಡೆಲ್ ವರ್ಚುವಲ್ ಸ್ಕೂಲ್ ಪ್ರಾರಂಭಿಸುತ್ತಿದ್ದೇವೆ, ಇದು ದೆಹಲಿ ಶಾಲಾ ಶಿಕ್ಷಣ ಮಂಡಳಿಯೊಂದಿಗೆ ಸಂಯೋಜಿತವಾಗಿದೆ.
ಇಂದಿನಿಂದ 9ನೇ ತರಗತಿಗೆ ಪ್ರವೇಶಾತಿ ಅರ್ಜಿಗಳನ್ನು ಆಹ್ವಾನಿಸುತ್ತಿದ್ದೇವೆ. ದೇಶಾದ್ಯಂತದ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ಲೈವ್ ತರಗತಿಗಳಿಗೆ ಹಾಜರಾಗಬಹುದು ಮತ್ತು ದೆಹಲಿಯ ಮಾಡೆಲ್ ವರ್ಚುವಲ್ ಸ್ಕೂಲ್ನಲ್ಲಿ ರೆಕಾರ್ಡ್ ಮಾಡಲಾದ ತರಗತಿಗಳು ಮತ್ತು ಅಧ್ಯಯನ ಸಾಮಗ್ರಿಗಳ ಬಗ್ಗೆ ಲಭ್ಯವಿದೆ. ಇದರೊಂದಿಗೆ ಜೆಇಇ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೇವೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದರು