ಚಿತ್ರದುರ್ಗ : ಮುರುಘಾಮಠದ ಶರಣರ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ಮಂಗಳವಾರ ಸಂತ್ರಸ್ತೆ ಬಾಲಕಿಯರು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.
ಮಂಗಳವಾರ ಸಂಜೆ ವೇಳೆ ಕೋರ್ಟ್ ನಲ್ಲಿ ಸಂತ್ರಸ್ತೆಯರು ಹೇಳಿಕೆ ದಾಖಲು ಮಾಡಿದ್ದಾರೆ. ಸಿಆರ್ ಪಿಸಿ164 ಅಡಿ ಜಡ್ಜ್ ಎದುರು ಹೇಳಿಕೆ ದಾಖಲಿಸಿದ್ದಾರೆ. ಹೇಳಿಕೆ ದಾಖಲಿಸಿದ ಸೀಲ್ಡ್ ಕವರ್ ನಾಳೆ ತನಿಖಾಧಿಕಾರಿ ಕೈಸೇರಲಿದೆ. ಈ ಮೂಲಕ ನಾಳೆ ಪೊಲೀಸರು ಮುರುಘಾ ಶ್ರೀಗೆ ನೋಟೀಸ್ ನೀಡುವ ಸಾಧ್ಯತೆಗಳಿವೆ. ನಾಳೆ ಮುರುಘಾಶ್ರೀ ವಶಕ್ಕೆ ಪಡೆದು ವಿಚಾರಣೆ ಹಾಗೂ ಮೆಡಿಕಲ್ ಟೆಸ್ಟ್ ನಡೆಯುವ ಸಾಧ್ಯತೆಗಳಿದೆ.
ಚಿತ್ರದುರ್ಗದ ಒಂದನೇ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶರ ಮುಂದೆ, ಮುರುಘಾ ಶ್ರೀಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದಂತ ಸಂತ್ರಸ್ತ ಬಾಲಕಿಯರನ್ನು ಪೊಲೀಸರು ಇದೀಗ ಹಾಜರುಪಡಿಸಿದ್ದಾರೆ.
ಮತ್ತೊಂದೆಡೆ ಚಿತ್ರದುರ್ಗ ನಗರದ ಡಿಸಿ ಕಚೇರಿಯ ಮುಂದೆ ಮುರುಘಾ ಶ್ರೀ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳು ನಿನ್ನೆ ಪ್ರತಿಭಟನೆ ನಡೆಸಿವೆ. ವಿವಿಧ ದಲಿತಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಮುರುಘಾ ಶರಣರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
BIGG NEWS : ಹಾವೇರಿಯಲ್ಲಿ ನಾಳೆಯಿಂದ ಅಗ್ನಿಪಥ್ ನೇಮಕಾತಿ : ಅಭ್ಯರ್ಥಿಗಳ ತಾತ್ಕಾಲಿಕ ವಸತಿಗೆ ಸಂಪರ್ಕ ಅಧಿಕಾರಿ ನೇಮಕ