ನವದೆಹಲಿ : ಭಾರತದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ (Farmer suicide case 2021) ಮಹಾರಾಷ್ಟ್ರ ಮೊದಲ ಸ್ಥಾನ (Maharashtra first place) ಪಡೆದುಕೊಂಡಿದ್ದರೆ, ಕರ್ನಾಟಕ 2 ನೇ ಸ್ಥಾನ (Karnataka 2nd Place) ಪಡೆದುಕೊಂಡಿದೆ.
BIGG NEWS :ರಾಜ್ಯ ಸರ್ಕಾರದಿಂದ ವಾಲ್ಮೀಕಿ ಸಮುದಾಯಕ್ಕೆ ಶೀಘ್ರವೇ ಸಿಹಿಸುದ್ದಿ : ಸಾರಿಗೆ ಸಚಿವ ಬಿ.ಶ್ರೀರಾಮುಲು
ಭಾರತದಲ್ಲಿ 2021 ನೇ ಸಾಲಿನಲ್ಲಿ 10,881 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಮಹಾರಾಷ್ಟ್ರದಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕರ್ನಾಟಕ 2 ನೇ ಸ್ಥಾನದಲ್ಲಿದೆ. ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಪೈಕಿ 5,318 ಕೃಷಿಕರಾಗಿದ್ದರೆ, 5563 ಕೃಷಿ ಕಾರ್ಮಿಕರಾಗಿದ್ದಾರೆ. ಸಾವಿಗೆ ಶರಣಾದ ಕೃಷಿಕರ ಪೈಕಿ ಶೇ. 37.3 ರಷ್ಟು ಮಹಾರಾಷ್ಟ್ರದವರಾಗಿದ್ದರೆ, ಶೇ. 19.9 ರಷ್ಟು ರೈತರು ಕರ್ನಾಟಕದವರು ಎಂದು ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
BIGG NEWS : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ `ಗಣೇಶೋತ್ಸವ’ಕ್ಕೆ ಹೈಕೋರ್ಟ್ ಅಸ್ತು
3 ನೇ ಸ್ಥಾನದಲ್ಲಿ ಆಂಧ್ರಪ್ರದೇಶ (9.8%) , ನಾಲ್ಕನೇ ಸ್ಥಾನದಲ್ಲಿ ಮಧ್ಯಪ್ರದೇಶ (6.2%) , 5 ನೇ ಸ್ಥಾನದಲ್ಲಿ ತಮಿಳುನಾಡು (5.5%) ರಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಶ್ಚಿಮಬಂಗಾಳ, ಬಿಹಾರ, ಒಡಿಶಾ ರಾಜ್ಯಗಳಲ್ಲಿ ಶೂನ್ಯ ಆತ್ಮಹತ್ಯೆ ವರದಿಯಾಗಿದೆ.
BIGG BREAKING NEWS : ಜೀವ ಬೆದರಿಕೆ ಆರೋಪ : ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿರುದ್ಧ ಕೇಸ್ ದಾಖಲು