ಬೆಂಗಳೂರು : ನೆರೆ ಸಂತ್ರಸ್ತರಿಗಾಗಿ ಕಂದಾಯ ಇಲಾಖೆಯಿಂದ 255 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗಾಗಿ ಕಂದಾಯ ಇಲಾಖೆಯಿಂದ 255 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ ನೀಡ್ತಿದ್ದಾರೆ. ಮಳೆಯಿಂದ ಮನೆಗಳಿಗೆ ಹಾನಿಯಾದರೆ ತಕ್ಷಣ ಪರಿಹಾರ ನೀಡಲಾಗುತ್ತದೆ. ರಾಜ್ಯದಲ್ಲಿ ಜೂನ್ನಿಂದ ಈವರೆಗೂ ಮಳೆಯಿಂದ 96 ಜನ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
BIGG NEWS : ರಾಜ್ಯದಲ್ಲಿ ನಿಲ್ಲದ ವರುಣಾರ್ಭಟ : ಇಂದು ಮಹಾಮಳೆಗೆ ನಾಲ್ವರು ಬಲಿ
ಇನ್ನು ರಾಜ್ಯದಲ್ಲಿ ಕಳೆದ 24 ಗಂಟೆಯೊಳಗೆ ರಾಮನಗರ, ಬಳ್ಳಾರಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 992 ಮನೆಗಳು ಹಾನಿಯಾಗಿವೆ. 10, 274 ಅರ್ಧ ಮನೆ ಹಾನಿಯಾಗಿವೆ. ನಿನ್ನೆ ಒಂದೇ ದಿನದಲ್ಲಿ 148 ಮನೆಗಳು ಹಾನಿಯಾಗಿದ್ದು, 258 ಜಾನುವಾರುಗಳು ಸಾವನ್ನಪ್ಪಿವೆ ಎಂದು ಹೇಳಿದರು.