ನೀವು Amazon, Flipkart, Myntra, ಅಥವಾ ಯಾವುದೇ ಇ-ಕಾಮರ್ಸ್ ಪ್ಲಾಟ್ಫಾರ್ಮ್ನಿಂದ ವಿಶೇಷವಾದದ್ದನ್ನು ಆರ್ಡರ್ ಮಾಡಿ ಅದರ ಬರುವಿಕೆಗಾಗಿ ಕಾಯುತ್ತಿರುತ್ತೀರಿ. ಅದು ನಿಮ್ಮ ಮನೆ ಬಾಗಿಲಿಗೆ ನಂತ್ರ, ಉತ್ಸುಕರಾಗಿ ಅದನ್ನು ತೆರೆದಾಗ ಕೆಲವರಿಗೆ ನಿರಾಸೆಯಾಗುವುದುಂಟು. ಇದಕ್ಕೆ ಕಾರಣ ನಿಮ್ಮ ಪಾರ್ಸೆಲ್ ಹಾನಿಗೊಳಗಾಗಿರುವುದು.
ಈ ವೇಳೆ ನೀವು ದೂರು ಸಲ್ಲಿಸಿ, ನಿಮ್ಮ ಆರ್ಡರ್ ವಾಪಸ್ ಮಾಡಿ ಮರುಪಾವತಿ ಮಾಡಿಕೊಂಡರೂ ನಿಮ್ಮ ನಿರಾಸೆ ದೂರವಾಗೋದಿಲ್ಲ. ವಸ್ತುಗಳಿಗೆ ಹಾನಿಯಾಗದಂತೆ ಒರಟಾದ ಪ್ಯಾಕಿಂಗ್ ಮಾಡಿದ ನಂತರವೂ ನಿಮ್ಮ ಪಾರ್ಸೆಲ್ ಏಕೆ ಹಾಳಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?… ಅದಕ್ಕೆ ಕಾರಣ ಇಲ್ಲಿದೆ ನೋಡಿ…
ಇಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ರೈಲಿನ ಮೂಲಕ ಕಳುಹಿಸಲಾದ ಪಾರ್ಸೆಲ್ಗಳನ್ನು ಅಲ್ಲಿದ್ದ ಕಾರ್ಮಿಕರು ಪಾರ್ಸೆಲ್ನಲ್ಲಿ ಸೂಕ್ಷ್ಮ ಉತ್ಪನ್ನಗಳಿರಬಹುದು ಎಂಬ ಅರಿವಿಲ್ಲದೇ ಅವುಗಳನ್ನು ಪ್ಲಾಟ್ಫಾರ್ಮ್ಗೆ ಬೇಕಾಬಿಟ್ಟಿ ಎಸೆಯುತ್ತಿರುವುದನ್ನು ನೋಡಬಹುದು.
ವೈರಲ್ ಆಗಿರುವ ವಿಡಿಯೋ ಗುವಾಹಟಿ ರೈಲು ನಿಲ್ದಾಣದ್ದಾಗಿದೆ. ಮಾರ್ಚ್ 24, 2022 ರಂದು ರಾತ್ರಿ 8:30 ಕ್ಕೆ ಹೊಸ ದೆಹಲಿ-ದಿಬ್ರುಗಢ ರಾಜಧಾನಿ ಎಕ್ಸ್ಪ್ರೆಸ್ ರೈಲಿನಿಂದ ಕಾರ್ಮಿಕರು ಪಾರ್ಸೆಲ್ಗಳನ್ನು ಎಸೆಯುತ್ತಿರುವ ದೃಶ್ಯ ಇದಾಗಿದೆ.
BIGG NEWS : ಗಣೇಶ ವಿಸರ್ಜನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾರ್ಗಸೂಚಿ ಬಿಡುಗಡೆ : ಈ ನಿಯಮ ಪಾಲನೆ ಕಡ್ಡಾಯ
BIGG BREAKING NEWS : ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟ `ಕಮಾಲ್ ಆರ್ ಖಾನ್’ ಅರೆಸ್ಟ್
BIGG NEWS : ಗಣೇಶ ವಿಸರ್ಜನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾರ್ಗಸೂಚಿ ಬಿಡುಗಡೆ : ಈ ನಿಯಮ ಪಾಲನೆ ಕಡ್ಡಾಯ