ದೆಹಲಿ: ಮುಖೇಶ್ ಅಂಬಾನಿ(Mukesh Ambani) ಸೋಮವಾರ, ʻರಿಲಯನ್ಸ್ ಸಮೂಹದ ರಿಟೇಲ್ ಕಂಪನಿ ಮುಖ್ಯಸ್ಥೆಯಾಗಿ ಇಶಾ ಅಂಬಾನಿ(Isha Ambani) ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಜೂನ್ನಲ್ಲಿ ರಿಲಯನ್ಸ್ ಜಿಯೋದ ಟೆಲಿಕಾಂ ಘಟಕದ ಅಧ್ಯಕ್ಷರಾಗಿ ಆಕಾಶ್ ಅಂಬಾನಿ ಅವರನ್ನು ನೇಮಕ ಮಾಡಿದ ನಂತರ ಆ ಘೋಷಣೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ 45 ನೇ ಎಜಿಎಂ (ವಾರ್ಷಿಕ ಸಾಮಾನ್ಯ ಸಭೆ) ನಲ್ಲಿ ರಿಟೇಲ್ ಕಂಪನಿ ಮುಖ್ಯಸ್ಥೆಯಾಗಿ ಇಶಾ ಅಂಬಾನಿಯನ್ನು ಮುಖ್ಯಸ್ಥೆ ಎಂದು ಘೋಷಿಸಿದ ನಂತ್ರ ಮಾತನಾಡಿದ ಇಶಾ ಅಂಬಾನಿ, ವಾಟ್ಸಾಪ್ ಬಳಸಿಕೊಂಡು ಆನ್ಲೈನ್ನಲ್ಲಿ ದಿನಬಳಕೆ ವಸ್ತುಗಳನ್ನು ಆರ್ಡರ್ ಮಾಡುವುದು ಹಾಗೂ ಪಾವತಿ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
“ಜಿಯೋಮಾರ್ಟ್ ಮತ್ತು ವಾಟ್ಸಾಪ್ ಪಾಲುದಾರಿಕೆಯು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜಿಯೋಮಾರ್ಟ್-ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ಪೇ, ಕ್ಯಾಶ್ ಆನ್ ಡೆಲಿವರಿ ಮತ್ತು ಇತರ ಪಾವತಿ ವಿಧಾನಗಳನ್ನು ಬಳಸಬಹುದು” ಎಂದು ಇಶಾ ಹೇಳಿದರು.
ಇನ್ನು ಇದೇ ವೇಳೆ ಅಂಬಾನಿ, ಜಿಯೋ 5ಜಿ ಸೇವೆಗಳನ್ನ ಘೋಷಿಸಿದ್ದು, 2022ರ ದೀಪಾವಳಿಯಲ್ಲಿ, ಜಿಯೋ 5ಜಿ ಅನ್ನು ಭಾರತದ ಮೆಟ್ರೋ ನಗರಗಳಲ್ಲಿ ಪ್ರಾರಂಭಿಸಲಾಗುವುದು. “5ಜಿಯನ್ನು ಬಳಸಿಕೊಂಡು, ನಾವು ಉನ್ನತ ಗುಣಮಟ್ಟದ, ಹೆಚ್ಚು ಕೈಗೆಟುಕುವ ಸ್ಥಿರ ಬ್ರಾಡ್ಬ್ಯಾಂಡ್ ಸೇವೆಗಳನ್ನ ತ್ವರಿತಗೊಳಿಸಬಹುದು” ಎಂದು ಹೇಳಿದರು. ಇನ್ನು “ಜಿಯೋ 5 ಜಿ ವಿಶ್ವದ ಅತ್ಯಂತ ಸುಧಾರಿತ 5 ಜಿ ಆಗಿದೆ” ಎಂದರು.
BIGG NEWS : ಬೆಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆ : ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
BIG NEWS: ಹಬ್ಬದ ಹೊತ್ತಿನಲ್ಲಿ ರಾಜ್ಯದ ಜನತೆಗೆ ಬಿಗ್ ಶಾಕ್: ನಂದಿನಿ ಹಾಲಿನ ಪಾಕೆಟ್ ದರ ಏರಿಕೆಗೆ ಪ್ರಸ್ತಾವನೆ
ನಿಮ್ಮ ‘ಮೆಮೊರಿ ಪವರ್’ ಹೆಚ್ಚಾಗ್ಬೇಕಾ.? ಈ ‘7 ಟಿಪ್ಸ್’ ಫಾಲೋ ಮಾಡಿ.! ‘ಮರೆವು’ ಹತ್ರನೂ ಸುಳಿಯೋಲ್ಲ.!