ನವದೆಹಲಿ ; ತೀವ್ರ ಪ್ರವಾಹಕ್ಕೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿದ್ದು, ಆನೇಕ ಸಾವು-ನೋವಿನ ಜೊತೆಗೆ ತೀವ್ರ ನಷ್ಟ ಸಂಭವಿಸಿದೆ. ಸಧ್ಯ ಪಾಕಿಸ್ತಾನದ ಕಷ್ಟಕ್ಕೆ ಮರುಗಿದ ಪ್ರಧಾನಿ ಮೋದಿ ದುಃಖ ವ್ಯಕ್ತಿಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ಮೋದಿ, “ಪಾಕಿಸ್ತಾನದಲ್ಲಿ ಪ್ರವಾಹದಿಂದ ಉಂಟಾದ ವಿನಾಶವನ್ನ ನೋಡಿ ದುಃಖಿತನಾಗಿದ್ದೇನೆ” ಎಂದಿದ್ದಾರೆ.
ಇನ್ನು “ಈ ನೈಸರ್ಗಿಕ ವಿಪತ್ತಿನಿಂದ ಬಾಧಿತರಾದವರ ಕುಟುಂಬಗಳಿಗೆ, ಗಾಯಗೊಂಡವರಿಗೆ ಮತ್ತು ಬಾಧಿತರಾದ ಎಲ್ಲರಿಗೂ ನಾವು ಸಂತಾಪಗಳನ್ನ ವ್ಯಕ್ತಪಡಿಸುತ್ತೇವೆ. ರಾಷ್ಟ್ರ ಶೀಘ್ರವಾಗಿ ಸಹಜ ಸ್ಥಿತಿಗೆ ಮರಳುವ ಭರವಸೆ ಹೊಂದಿದ್ದೇವೆ” ಎಂದು ಹೇಳಿದ್ದಾರೆ.
Prime Minister Modi tweets "Saddened to see the devastation caused by the floods in Pakistan. We extend our heartfelt condolences to the families of the victims, the injured and all those affected by this natural calamity and hope for an early restoration of normalcy"
(File pic) https://t.co/acdr1W0v7c pic.twitter.com/7DoYA7UUB3
— ANI (@ANI) August 29, 2022
ಅಂದ್ಹಾಗೆ, ಜೂನ್ನಿಂದ ಪಾಕಿಸ್ತಾನದಲ್ಲಿ ಮಾನ್ಸೂನ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 1,136 ಕ್ಕೆ ತಲುಪಿದೆ ಎಂದು ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಇನ್ನು ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 75 ಜನರು ಸಾವನ್ನಪ್ಪಿದ್ದಾರೆ ಎಂದು ಎಎಫ್ಪಿ ಸುದ್ದಿ ಸಂಸ್ಥೆ ತಿಳಿಸಿದೆ.