ದೋಯಿವಾಲಾ : ಡೆಹ್ರಾಡೂನ್ನ ರಾಣಿಪೋಖರಿಯಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ, ಡೆಹ್ರಾಡೂನ್ನ ರಾಣಿಪೋಖರಿಯಲ್ಲಿ ತನ್ನ ತಾಯಿ, ಪತ್ನಿ ಮತ್ತು ಪುತ್ರಿಯರು ಸೇರಿದಂತೆ ತನ್ನ ಸ್ವಂತ ಕುಟುಂಬದ ಐದು ಸದಸ್ಯರನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಪಟ್ಟಣದ ದೋಯಿವಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಮಹೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯ ನಿವಾಸಿ ಮಹೇಶ್ ಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ. ಅವರು ಕಳೆದ 7-8 ವರ್ಷಗಳಿಂದ ಡೆಹ್ರಾಡೂನ್ನ ರಾಣಿಪೋಖರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಕಮಲೇಶ್ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ. ತಿವಾರಿ ತನ್ನ ತಾಯಿ ಬಿತನ್ ದೇವಿ (75), ಪತ್ನಿ ನೀತು ದೇವಿ (36) ಮತ್ತು ಪುತ್ರಿಯರಾದ ಅಪರ್ಣಾ (13), ಅನ್ನಪೂರ್ಣ (9) ಮತ್ತು ಸ್ವರ್ಣಾ (11) ಅವರನ್ನು ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಿವಾರಿ ಮತ್ತು ಅವರ ಪತ್ನಿ ಹಲವಾರು ಕೌಟುಂಬಿಕ ವಿಷಯಗಳ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಹೆಂಡತಿ ಅವನ ವೃತ್ತಿಗಾಗಿ ಅವನನ್ನು ಬೈಯುತ್ತಿದ್ದಳು ಎನ್ನಲಾಗಿದೆ.
ಮಹೇಶ್ ಹಾಗೂ ಆತನ ಪತ್ನಿ ನೀತು ಬೆಳಗಿನ ಉಪಹಾರ ವಿಷಯವಾಗಿ ಜಗಳವಾಡ್ತಿದ್ದರು ಎನ್ನಲಾಗಿದ್ದು, ಇದೇ ವೇಳೇ, ಮೊದಲು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ, ಬಳಿಕ ಹಿರಿಯ ಮಗಳು ಅಪರ್ಣಾ, ಎರಡನೇ ಮಗಳು ಸುವರ್ಣಾ ಹಾಗೂ ಅನ್ನಪೂರ್ಣಳನ್ನು ಕೊಲೆ ಮಾಡಿದ ಬಳಿಕ ತಾಯಿ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿ ಕೊಂದಿದ್ದಾನೆ ಎನ್ನಲಾಗಿದೆ.