ಕೆಎನ್ಎನ್ಡಿಜಿಟಲ್ಡೆಸ್ಕ್: ನೀವು ಇಲ್ಲಿವರೆಗೆ ಕಂಡು ಕೇಳರಿಯದ ಆದರೆ ಹೀಗೂ ಇರಬಹುದು ಎಂಬಂತಹ ಗಣೇಶನ ಹುಟ್ಟಿನ ಬಗ್ಗೆ ಕತೆ ಇದೆ. ಬ್ರಹ್ಮ ವೈವರ್ತ ಪುರಾಣದಲ್ಲಿ ಈ ಕತೆಯನ್ನು ಹೇಳಲಾಗಿದೆ. ಅದರಲ್ಲಿ ಗಣೇಶನ ಹುಟ್ಟು ಹಾಗು ಆತನಿಗೆ ಆನೆ ಮುಖ ಬಂಡ ಕತೆ ವಿಭಿನ್ನವಾಗಿದೆ. ಅದು ಏನು ಕತೆ ನೋಡಿ…
ಶಿವನ ಅಣತಿಯಂತೆ ಪಾರ್ವತಿಯು ಒಂದು ವರ್ಷ ಪುಣ್ಯಕ ವ್ರತ ಮಾಡಿದ್ದರಿಂದ ಶ್ರೀ ಕೃಷ್ಣನು ಅವರ ಮಗನಾಗಿ ಜನಿಸುವುದಾಗಿ ಮಾತು ಕೊಟ್ಟ. ಕೃಷ್ಣನನ್ನು ಮಗನಾಗಿ ಪಡೆದ ಪಾರ್ವತಿ ಬಹಳ ಉತ್ಸಾಹದಿಂದ ಸಕಲ ದೇವಾನು ದೇವತೆಗಳನ್ನು ಮಗುವನ್ನು ನೋಡಲು ಆಹ್ವಾನಿಸಿದಳು. ಶನಿ ಮಹಾರಾಜ ಬಂದರೂ ಮಗುವನ್ನು ನೋಡದೆ ನೆಲವನ್ನು ನೋಡುತ್ತಾ ನಿಂತನಂತೆ. ಹಾಗೇಕೆಂದು ಪಾರ್ವತಿ ಕೇಳಲು ತಾನು ಮಗುವನ್ನು ನೇರವಾಗಿ ನೋಡಿದಲ್ಲಿ ಅದು ಮಗುವಿಗೆ ಹಾನಿಯಾಗುವುದು ಎಂದು ಹೇಳಿದ. ಆದರೆ ಪಾರ್ವತಿ ಅದನ್ನು ಲೆಕ್ಕಿಸದೆ ತನ್ನ ಮಗನನ್ನು ನೋಡಲು ಹೇಳಿದಳು.
ಶನಿಯ ದೃಷ್ಟಿ ಮಗುವಿನ ಮೇಲೆ ಬಿದ್ದದ್ದೇ ತಡ ಮಗುವಿನ ತಲೆ ಎಗರಿ ಹೋಯಿತಂತೆ. ತಲೆ ಇಲ್ಲದ ಮಗುವನ್ನು ನೋಡಿ ಆಘಾತಗೊಂಡ ಶಿವ-ಪಾರ್ವತಿಯರನ್ನು ಕಂಡು, ಮಹಾವಿಷ್ಣು ಗರುಡವನ್ನೇರಿ ಪುಷ್ಪ-ಭದ್ರ ನದಿಯ ದಂಡೆಗೆ ಹೋಗಿ ಅಲ್ಲಿಂದ ಒಂದು ಆನೆಯ ತಲೆಯನ್ನು ತಂದು. ಮಗುವಿನ ದೇಹಕ್ಕೆ ಜೋಡಿಸಿ ಜೀವ ಕೊಟ್ಟು, ಅಗ್ರ ಪೂಜೆ ಅವನಿಗೇ ಸಲ್ಲಲಿ ಹಾಗೂ ಯೋಗಿಗಳಲ್ಲಿ ಪ್ರಥಮನಾಗಲಿ ಎಂದು ವರವಿತ್ತನಂತೆ. ಈಶ್ವರನು ಗಣೇಶನನ್ನು ಸಕಲಗಣಗಳಿಗೆ ಅಧಿಕಾರಿಯನ್ನಾಗಿ ಮಾಡಿ, ಅವನ ನಾಮ ಜಪದಿಂದ ಸಕಲ ವಿಘ್ನಗಳೂ ನಿವಾರಣೆಯಾಗಲಿ ಎಂದು ವರವಿತ್ತನು.