ಬೆಂಗಳೂರು: ಗೌರಿ-ಗಣೇಶೋತ್ಸವಕ್ಕೆ ಸಂಭ್ರಮಾಚರಣೆ ಹಿನ್ನೆಲೆ ಕೆಎಸ್ಆರ್ಟಿಸಿ ಬಸ್ಸುಗಳಿಗೆ ಸಿಕ್ಕಪಟ್ಟೇ ಡಿಮ್ಯಾಂಡ್ ಶುರುವಾಗಿದ್ದು. ಬೆಂಗಳೂರಿನಿಂದ -ತಮ್ಮ ಊರಿನತ್ತ ತೆರಳೋ ಜನರ ಸಂಖ್ಯೆ ಹೆಚ್ಚಳದ ಮಧ್ಯೆ ಈ ಬಾರಿ ಬೇಡಿಕೆ ಏರಿಕೆಯಾಗಿದೆ
ಕೆಎಸ್ಆರ್ಟಿಸಿ ಬಸ್ಗಳಿಗೆ ಈಗಾಗಲೇ ಟಿಕೆಟ್ ಬುಕ್ಕಿಂಗ್ ಹೆಚ್ಚಾಗಿದ್ದು, ಆದಾಯವೂ ಹರಿದುಬರುತ್ತಿದೆ. ಇಂದಿನಿಂದಲೇ ಬುಕ್ಕಿಂಗ್ ಹೌಸ್ಫುಲ್ ಆಗಿದ್ದು, ಸ್ಥಳದಲ್ಲೇ ಟಿಕೆಟ್ ಖರೀದಿಸಿ ಹೋಗುವವರು ನಿಂತುಕೊಂಡೇ ಪ್ರಯಾಣಿಸಬೇಕಿದೆ. ಸದ್ಯ ಮೂರು ದಿನಗಳ ಕಾಲ ಕೆಎಸ್ಆರ್ಟಿಸಿ ಬಸ್ಗಳಿಗೆ ಭಾರೀ ಬೇಡಿಕೆ ಹೆಚ್ಚಿದೆ.
ಇಂದು (ಆ.29) 8, 8,006, ಆ.30 ರಂದು 9,206, ಆ.31 ರಂದು 5,692 ಸೀಟುಗಳು ಈಗಾಗಲೇ ಕಾಯ್ದಿರಿಸಲಾಗಿದೆ. ಇಂದು 40 ಬಸ್ಸುಗಳು ಹಾಗೂ ನಾಳೆ ಆಗಸ್ಟ್ 30 ರಂದು 67 ಬಸ್ಸುಗಳನ್ನು ಕಾಯ್ದಿರಿಸಲಾಗಿದ್ದು, ಹೆಚ್ಚುವರಿಯಾಗಿ 500 ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಾರಿಯ ಗೌರಿ-ಗಣೇಶೋತ್ಸವಕ್ಕೆ KSRTC ಬಸ್ಸಿಗೆ ಬೇಡಿಕೆ ಹೆಚ್ಚಳದಿಂದ ಆಧಾಯ ಹೆಚ್ಚಳವಾಗುವ ಸಾಧ್ಯತೆಯಿದೆ