ತುಮಕೂರು : ತಾತನ ಅಂತ್ಯ ಸಂಸ್ಕಾರ ನೆರವೇರಿಸಲು 12 ದಿನದ ಬಾಣಂತಿ ಜಮೀನಿನ ಬದುಗಳಲ್ಲಿ 1ಕಿ.ಮೀ ದೂರ ನಡೆದು ಬಂದ ದುರಂತ ಘಟನೆ ಬೆಳಕಿಗೆ ಬಂದಿದೆ
ALEART: ಆನ್ಲೈನ್ನಲ್ಲಿ ವ್ಯವಹರಿಸುವ ಮುನ್ನ ಇವುಗಳನ್ನು ನೆನಪಿಟ್ಟುಕೊಳ್ಳಿ, ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ
ಮಧುಗಿರಿ ತಾಲೂಕಿನ ಗೌರೆಡ್ಡಿ ಪಾಳ್ಯದ ಸರ್ವೋದಯ ಶಾಲೆ ಶಿಕ್ಷಕ ಸದಾ ಶಿವರೆಡ್ಡಿ ತಂದೆ ಶನಿವಾರ ಸಂಜೆ ವಯೋ ಸಹಜ ಖಾಯಿಲೆಯಿಂದ ಮೃತರಾಗಿದ್ದರಿಂದ ಭಾನುವಾರ ಅಂತ್ಯ ಸಂಸ್ಕಾರ ಇಟ್ಟುಕೊಳ್ಳಲಾಗಿತ್ತು.
ಅಂತ್ಯ ಸಂಸ್ಕಾರಕ್ಕೆ ಬರಬೇಕಿದ್ದ ಸಂಬಂಧಿಕರು ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದರಿಂದ ಬರಲಿಲ್ಲ ಆದರೆ ತಾತನ ಅಂತ್ಯ ಸಂಸ್ಕಾರ ನೆರವೇರಿಸಲು12ದಿನದ ಬಾಣಂತಿ ಜಮೀನಿನ ಬದುಗಳಲ್ಲಿ 1ಕಿ.ಮೀ ದೂರ ನಡೆದು ಬಂದಿದ್ದಾರೆ
ALEART: ಆನ್ಲೈನ್ನಲ್ಲಿ ವ್ಯವಹರಿಸುವ ಮುನ್ನ ಇವುಗಳನ್ನು ನೆನಪಿಟ್ಟುಕೊಳ್ಳಿ, ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ
ಕೊಡಿಗೇನಹಳ್ಳಿಯ ಜಯಮಂಗಲಿ ನದಿ ಅಂಚಿನಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು,ಮಳೆಯಿಂದ ರಸ್ತೆ ಜಲಾವೃತಗೊಂಡಿದ್ದು ರಸ್ತೆಗಳಿಲ್ಲದೆ ಅಂತ್ಯ ಸಂಸ್ಕಾರಕ್ಕೆ ತೆರಳಲು ಸಾಧ್ಯವಾಗದೇ ಇಂದಿಗೂ ಪರದಾಡುತ್ತಿದ್ದಾರೆ. ಜಯಮಂಗಲಿ ನದಿಯಲ್ಲಿ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ನದಿ ದಾಟಿ ಅಂತ್ಯ ಸಂಸ್ಕಾರ ಮಾಡೋ ಪರಿಸ್ಥಿತಿ ಎದುರಾಗಿದೆ.