ಮುಂಬೈ ; ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯೊಬ್ಬಳನ್ನ ಆರ್ಪಿಎಫ್ ಯೋಧನೊಬ್ಬ ತನ್ನ ಜೀವ ಪಣಕ್ಕಿಟ್ಟು ರಕ್ಷಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಯುವತಿ ತನ್ನ ಪ್ರಿಯಕರನ ದ್ರೋಹ ಮಾಡಿದ್ದಾನೆ ಎಂದು ನೊಂದು ತನ್ನ ಜೀವನವನ್ನ ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಳು ಎನ್ನುವ ಮಾಹಿತಿ ಲಭಯವಾಗಿದೆ.
ಭಾನುವಾರ ಸಂಜೆ ಬೈಕುಲ್ಲಾ ಠಾಣೆ ಬಳಿ ಈ ಘಟನೆ ನಡೆದಿದ್ದು, ಆರ್ಪಿಎಫ್ ಜವಾನನ ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಾಹಿತಿ ಪ್ರಕಾರ ದಾದರ್ʼನ 22 ವರ್ಷದ ಯುವತಿ ತನ್ನ ಪ್ರಿಯಕರನಿಂದ ವಂಚನೆಗೊಳಗಾಗಿದ್ದಾಳೆ. ಬಹಳ ದಿನಗಳಿಂದ ಆತನ ಜೊತೆ ಸಂಬಂಧದಲ್ಲಿದ್ದ ಯುವತಿ, ಈಗ ಆಕೆಯ ಗೆಳೆಯ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಯುವತಿಯ ಮನಸ್ಸು ಮುರಿದಿದ್ದು, ಅತ್ಮಹ್ಯತೆಗೆ ಯತ್ನಿಸಿದ್ದಾಳೆ ಎಂದು ಆರ್ಪಿಎಫ್ ಅಧಿಕಾರಿಗಳ ವಿಚಾರಣೆ ವೇಳೆ ಯುವತಿ ಎಂದು ಹೇಳಿದ್ದಾರೆ.
ಎರಡನೇ ಪ್ರಯತ್ನವೂ ವಿಫಲ
ಭಾನುವಾರ ಎರಡು ಬಾರಿ ರೈಲಿನ ಮುಂದೆ ಜಿಗಿಯಲು ಪ್ರಯತ್ನಿಸಿದೆ ಎಂದು ಬಾಲಕಿ ಹೇಳಿದ್ದಾಳೆ. ಮೊದಲ ಬಾರಿಗೆ ಸಂಜೆ 5.55ರ ಸುಮಾರಿಗೆ ರೈಲಿನ ಮುಂದೆ ಜಿಗಿಯಲು ಮುಂದಾದಾಗ ಸ್ಥಳದಲ್ಲಿದ್ದ ಪ್ರಯಾಣಿಕರು ಅವರನ್ನ ಎಳೆದೊಯ್ದರು. ಇದಾದ ಸ್ವಲ್ಪ ಸಮಯದ ನಂತ್ರ ಆಕೆ ಛತ್ರಪತಿ ಶಿವಾಜಿ ಟರ್ಮಿನಸ್-ಬಾಂದ್ರಾ ಮಾರ್ಗದಲ್ಲಿ ರೈಲಿನ ಮುಂದೆ ಹಾರಲು ಮುಂದಾಗಿದ್ದಾಳೆ. ಆದರೆ ಈ ವೇಳೆ ಆರ್ಪಿಎಫ್ ಜವಾನ ಆಕೆಯನ್ನ ರಕ್ಷಿಸಿದ್ದಾರೆ. ವಿಪರ್ಯಾಸ ಅಂದ್ರೆ ಎರಡು ಬಾರಿ ಉಳಿಸಿದ ನಂತರವೂ ಯುವತಿ ಜೀವ ತೆಗೆದುಕೊಳ್ಳುವ ಹಠಕ್ಕೆ ಬಿದ್ದಿದ್ದಾಳೆ. ಹಾಗಾಗಿ ಆರ್ಪಿಎಫ್ ಆಕೆಯನ್ನ ಜಿಆರ್ಪಿಗೆ ಒಪ್ಪಿಸಿದೆ.
ವೀಡಿಯೋದಲ್ಲಿ ಕಂಡು ಬರುವ ಯೋಧನ ಶೌರ್ಯ
ರೈಲು ಹಳಿ ಮೇಲೆ ಪ್ಲಾಟ್ಫಾರ್ಮ್ ಕಡೆಗೆ ಚಲಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದ್ದಕ್ಕಿದ್ದಂತೆ ಯುವತಿ ಟ್ರ್ಯಾಕ್ ಮೇಲೆ ಬಂದು ರೈಲಿನ ಕಡೆಗೆ ಓಡಲು ಪ್ರಾರಂಭಿಸುತ್ತಾಳೆ. ರೈಲು ಯುವತಿಯನ್ನ ಸಮೀಪಿಸುತ್ತಿದ್ದಂತೆ, ಆರ್ಪಿಎಫ್ ಜವಾನ್ ಓಡಿ ಬಂದು ಆಕೆಯನ್ನ ಎಳೆಯುತ್ತಾನೆ. 14 ಸೆಕೆಂಡ್ಗಳ ಈ ವೀಡಿಯೋ ಸಾಕಷ್ಟು ರೋಚಕವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹಂಚಿಕೆಯಾಗುತ್ತಿದೆ. ಅಂದ್ಹಾಗೆ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಆರ್ಪಿಎಫ್ ಜವಾನನನ್ನ ಸಬ್ ಇನ್ಸ್ಪೆಕ್ಟರ್ ರವೀಂದ್ರ ಎಂದು ಗುರುತಿಸಲಾಗಿದೆ.
ವೈರಲ್ ವಿಡಿಯೋ ನೋಡಿ.!
ट्रेन के सामने आकर सुसाइड करने की कोशिश करने वाली एक महिला को रेलवे पुलिस के कर्मचारी ने बचा लिया. सामने से ट्रेन आ रही थी और पुलिसकर्मी ने महिला को पटरी से धक्का देकर उसकी जान बचाई.
वायरल वीडियो #Mumbai के भायखला स्टेशन का है 👇 pic.twitter.com/q6WlnB7fvP
— Kumar Abhishek (TV9 Bharatvarsh) (@active_abhi) August 29, 2022