ನವದೆಹಲಿ : ಮಥುರಾ ಕೃಷ್ಣ ಜನ್ಮಭೂಮಿಯ ವೀಡಿಯೊಗ್ರಫಿ ಸಮೀಕ್ಷೆಯನ್ನ ನಡೆಸಲು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದ್ದು, 4 ತಿಂಗಳಲ್ಲಿ ಸಮೀಕ್ಷಾ ವರದಿಯನ್ನ ಸಲ್ಲಿಸುವಂತೆ ಸೂಚಿಸಿದೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಪಿಯೂಷ್ ಅಗರ್ವಾಲ್ ಅವ್ರ ಪೀಠವು ಈ ಆದೇಶವನ್ನ ಹೊರಡಿಸಿದೆ. ಸಮೀಕ್ಷೆಗಾಗಿ ಒಬ್ಬ ಹಿರಿಯ ವಕೀಲರನ್ನ ಆಯುಕ್ತರಾಗಿ ಮತ್ತು ಇಬ್ಬರು ವಕೀಲರನ್ನ ಸಹಾಯಕ ಆಯುಕ್ತರಾಗಿ ನೇಮಿಸಲಾಗುವುದು. ಸಮೀಕ್ಷೆಯ ಸಮಯದಲ್ಲಿ ವಾದಿಗಳು ಮತ್ತು ಪ್ರತಿವಾದಿಗಳು ಸಹ ಉಪಸ್ಥಿತರಿರುತ್ತಾರೆ. ಅಲ್ಲದೇ, ಜಿಲ್ಲೆಯ ಸಮರ್ಥ ಅಧಿಕಾರಿಗಳು ಸಹ ಸ್ಥಳದಲ್ಲೇ ಇರುತ್ತಾರೆ.
ಅಲಹಾಬಾದ್ ಹೈಕೋರ್ಟ್ ಸೋಮವಾರ ಶ್ರೀಕೃಷ್ಣ ಜನ್ಮಸ್ಥಾನ-ಈದ್ಗಾ ವಿವಾದ ಪ್ರಕರಣದ ವಿಚಾರಣೆ ನಡೆಸಿದ್ದು, ಸಧ್ಯ ಸಮೀಕ್ಷೆ ನಡೆಸುವಂತೆ ಹೈಕೋರ್ಟ್ ಜಿಲ್ಲಾ ನ್ಯಾಯಾಲಯಕ್ಕೆ ಆದೇಶಿಸಿದೆ. ಶ್ರೀಕೃಷ್ಣನ ಜನ್ಮಸ್ಥಳದ ಪ್ರಮುಖ ಪಕ್ಷಕಾರ ಮನೀಶ್ ಯಾದವ್ ಕಳೆದ ವರ್ಷ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ವಿವಾದಿತ ಆವರಣಗಳ ವೈಜ್ಞಾನಿಕ ಸಮೀಕ್ಷೆ ಮತ್ತು ಮೇಲ್ವಿಚಾರಣೆಗಾಗಿ ನ್ಯಾಯಾಲಯದ ಆಯುಕ್ತರನ್ನ ನೇಮಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅಂದ್ಹಾಗೆ, ಒಂದು ವರ್ಷ ಕಳೆದರೂ, ಈ ಅರ್ಜಿಯ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ.