ನವದೆಹಲಿ : ಆರ್ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮಗಳು, ರಿಲಾಯನ್ಸ್ ರೀಟೇಲ್ ಅಧ್ಯಕ್ಷ್ಯೆ ಇಶಾ ಅಂಬಾನಿ ಜಿಯೋಮಾರ್ಟ್ ಕ್ವಾಲ್ಕಾಮ್ ಜೊತೆ ಜಿಯೋಮಾರ್ಟ್ ಪಾಲುದಾರಿಕೆಯನ್ನ ಘೋಷಿಸಿದ್ದಾರೆ.
ಮಾರುಕಟ್ಟೆ-ಬಂಡವಾಳೀಕರಣದ ದೃಷ್ಟಿಯಿಂದ ಭಾರತದ ಅತಿದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL)ನ 45ನೇ ವಾರ್ಷಿಕ ಸಾಮಾನ್ಯ ಸಭೆ (AGM) ನಡೆಯುತ್ತಿದ್ದು, ಈ ಸಭೆಯಲ್ಲಿ ಇಶಾ ಈ ಘೋಷಣೆ ಮಾಡಿದ್ದಾರೆ.
“ಜಿಯೋಮಾರ್ಟ್ ಮತ್ತು ವಾಟ್ಸಾಪ್ ಪಾಲುದಾರಿಕೆಯು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜಿಯೋಮಾರ್ಟ್-ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ಪೇ, ಕ್ಯಾಶ್ ಆನ್ ಡೆಲಿವರಿ ಮತ್ತು ಇತರ ಪಾವತಿ ವಿಧಾನಗಳನ್ನು ಬಳಸಬಹುದು” ಎಂದು ಇಶಾ ಹೇಳಿದರು.
ಇನ್ನು ಇದೇ ವೇಳೆ ಅಂಬಾನಿ, ಜಿಯೋ 5ಜಿ ಸೇವೆಗಳನ್ನ ಘೋಷಿಸಿದ್ದು, 2022ರ ದೀಪಾವಳಿಯಲ್ಲಿ, ಜಿಯೋ 5ಜಿ ಅನ್ನು ಭಾರತದ ಮೆಟ್ರೋ ನಗರಗಳಲ್ಲಿ ಪ್ರಾರಂಭಿಸಲಾಗುವುದು. “5ಜಿಯನ್ನು ಬಳಸಿಕೊಂಡು, ನಾವು ಉನ್ನತ ಗುಣಮಟ್ಟದ, ಹೆಚ್ಚು ಕೈಗೆಟುಕುವ ಸ್ಥಿರ ಬ್ರಾಡ್ಬ್ಯಾಂಡ್ ಸೇವೆಗಳನ್ನ ತ್ವರಿತಗೊಳಿಸಬಹುದು” ಎಂದು ಹೇಳಿದರು. ಇನ್ನು “ಜಿಯೋ 5 ಜಿ ವಿಶ್ವದ ಅತ್ಯಂತ ಸುಧಾರಿತ 5 ಜಿ ಆಗಿದೆ” ಎಂದರು.