ನವದೆಹಲಿ : ಆರ್ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಕ್ವಾಲ್ಕಾಮ್ ಜೊತೆ ಜಿಯೋ ಪಾಲುದಾರಿಕೆಯನ್ನ ಘೋಷಿಸಿದ್ದಾರೆ.
ಮಾರುಕಟ್ಟೆ-ಬಂಡವಾಳೀಕರಣದ ದೃಷ್ಟಿಯಿಂದ ಭಾರತದ ಅತಿದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL)ನ 45ನೇ ವಾರ್ಷಿಕ ಸಾಮಾನ್ಯ ಸಭೆ (AGM)ಯಲ್ಲಿ ಮುಖೇಶ್ ಅಂಬಾನಿ ಈ ಘೋಷಣೆ ಮಾಡಿದ್ದಾರೆ.
ಇನ್ನು ಇದೇ ವೇಳೆ ಅಂಬಾನಿ, ಜಿಯೋ 5ಜಿ ಸೇವೆಗಳನ್ನ ಘೋಷಿಸಿದ್ದು, 2022ರ ದೀಪಾವಳಿಯಲ್ಲಿ, ಜಿಯೋ 5ಜಿ ಅನ್ನು ಭಾರತದ ಮೆಟ್ರೋ ನಗರಗಳಲ್ಲಿ ಪ್ರಾರಂಭಿಸಲಾಗುವುದು. “5ಜಿಯನ್ನು ಬಳಸಿಕೊಂಡು, ನಾವು ಉನ್ನತ ಗುಣಮಟ್ಟದ, ಹೆಚ್ಚು ಕೈಗೆಟುಕುವ ಸ್ಥಿರ ಬ್ರಾಡ್ಬ್ಯಾಂಡ್ ಸೇವೆಗಳ ರೋಲ್-ಔಟ್ ಅನ್ನು ತ್ವರಿತಗೊಳಿಸಬಹುದು” ಎಂದು ಮುಕೇಶ್ ಅಂಬಾನಿ ಹೇಳಿದರು. ಇನ್ನು “ಜಿಯೋ 5 ಜಿ ವಿಶ್ವದ ಅತ್ಯಂತ ಸುಧಾರಿತ 5 ಜಿ ಆಗಿದೆ” ಎಂದು ಹೇಳಿದರು.
“ನಮ್ಮ ಕಂಪನಿಯು ವಾರ್ಷಿಕ ಆದಾಯದಲ್ಲಿ 100 ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಿಲಯನ್ಸ್ನ ಏಕೀಕೃತ ಆದಾಯವು ಶೇಕಡಾ 47ರಷ್ಟು ಏರಿಕೆಯಾಗಿ 7.93 ಲಕ್ಷ ಕೋಟಿ ರೂ.ಗೆ ಅಥವಾ 104.6 ಬಿಲಿಯನ್ ಡಾಲರ್ಗೆ ತಲುಪಿದೆ.
ಈ ನಡುವೆ ಭಾರತದ ಮೂಲಸೌಕರ್ಯವನ್ನ ಅಭಿವೃದ್ಧಿಪಡಿಸಲು ಕ್ವಾಲ್ಕಮ್ ಬದ್ಧವಾಗಿದೆ. ಇನ್ನು “ಭಾರತವು ಜಿಯೋದೊಂದಿಗೆ ಸ್ವಾತಂತ್ರ್ಯದ 75ನೇ ವರ್ಷವನ್ನ ಆಚರಿಸುತ್ತಿರುವಾಗ, ನಾಗರಿಕರು ಮತ್ತು ವ್ಯವಹಾರಗಳ ಯಶಸ್ಸನ್ನ ಸಕ್ರಿಯಗೊಳಿಸುವ ಮತ್ತು ಪ್ರಧಾನಮಂತ್ರಿಗಳು ಕಲ್ಪಿಸಿದ ನವ ಭಾರತವನ್ನ ಸಾಧಿಸುವ ಡಿಜಿಟಲ್ ಮೂಲಸೌಕರ್ಯವನ್ನ ಅಭಿವೃದ್ಧಿಪಡಿಸಲು ನಾವು ಬದ್ಧರಾಗಿದ್ದೇವೆ” ಎಂದು ಕ್ವಾಲ್ಕಾಮ್ ಸಿಇಒ ಶ್ರೀ ಕ್ರಿಸ್ಟಿಯಾನೊ ಅಮೋನ್ ಹೇಳಿದ್ದಾರೆ.