ನವದೆಹಲಿ : ಮಾರುಕಟ್ಟೆ-ಬಂಡವಾಳೀಕರಣದ ದೃಷ್ಟಿಯಿಂದ ಭಾರತದ ಅತಿದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL)ನ 45 ನೇ ವಾರ್ಷಿಕ ಸಾಮಾನ್ಯ ಸಭೆ (AGM) ಪ್ರಾರಂಭವಾಗಿದೆ. ಆರ್ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮುಖ್ಯ ಭಾಷಣ ಮಾಡಲಿದ್ದಾರೆ.
ಅಂಬಾನಿ ಸೋಮವಾರ ಜಿಯೋ 5 ಜಿ ಸೇವೆಗಳನ್ನು ಘೋಷಿಸಿದರು. 2022 ರ ದೀಪಾವಳಿಯಲ್ಲಿ, ಜಿಯೋ 5 ಜಿ ಅನ್ನು ಭಾರತದ ಮೆಟ್ರೋ ನಗರಗಳಲ್ಲಿ ಪ್ರಾರಂಭಿಸಲಾಗುವುದು. “5ಜಿಯನ್ನು ಬಳಸಿಕೊಂಡು, ನಾವು ಉನ್ನತ ಗುಣಮಟ್ಟದ, ಹೆಚ್ಚು ಕೈಗೆಟುಕುವ ಸ್ಥಿರ ಬ್ರಾಡ್ಬ್ಯಾಂಡ್ ಸೇವೆಗಳ ರೋಲ್-ಔಟ್ ಅನ್ನು ತ್ವರಿತಗೊಳಿಸಬಹುದು” ಎಂದು ಮುಕೇಶ್ ಅಂಬಾನಿ ಹೇಳಿದರು, “ಜಿಯೋ 5 ಜಿ ವಿಶ್ವದ ಅತ್ಯಂತ ಸುಧಾರಿತ 5 ಜಿ ಆಗಿದೆ” ಎಂದು ಅವರು ಹೇಳಿದರು.
“ನಮ್ಮ ಕಂಪನಿಯು ವಾರ್ಷಿಕ ಆದಾಯದಲ್ಲಿ 100 ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಿಲಯನ್ಸ್ನ ಏಕೀಕೃತ ಆದಾಯವು ಶೇಕಡಾ 47 ರಷ್ಟು ಏರಿಕೆಯಾಗಿ 7.93 ಲಕ್ಷ ಕೋಟಿ ರೂ.ಗೆ ಅಥವಾ 104.6 ಬಿಲಿಯನ್ ಡಾಲರ್ಗೆ ತಲುಪಿದೆ.
Welcome to the 45th Annual General Meeting of Reliance Industries Limited. #RILAGM #RILAGM2022 https://t.co/xzw0WPdNwU
— Reliance Jio (@reliancejio) August 29, 2022