ಭುಜ್: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಜ್ಞೆ ಮಾಡಿದ್ದಾರೆ.
ಕಛ್ ಗೆ ಒಂದು ದಿನದ ಪ್ರವಾಸದಲ್ಲಿರುವ ಪ್ರಧಾನಿ, “2001 ರ ವಿನಾಶಕಾರಿ ಭೂಕಂಪದ ನಂತರ, ಜಿಲ್ಲೆಯನ್ನು ಅಭಿವೃದ್ಧಿಪಡಿಸುವುದಾಗಿ ನಾನು ಭರವಸೆ ನೀಡಿದ್ದೆ ಮತ್ತು 2022 ರಲ್ಲಿ ಅದು ಎಷ್ಟು ಉತ್ತಮವಾಗಿ ಅಭಿವೃದ್ಧಿಗೊಂಡಿದೆ ಎಂದು ನೋಡಿದ್ದೇನೆ. ಇಂದು ನಾನು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಭರವಸೆ ನೀಡುತ್ತಿದ್ದೇನೆ ಮತ್ತು ಖಂಡಿತವಾಗಿಯೂ ಅದನ್ನು ಮಾಡುತ್ತೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಭುಜ್ ನಲ್ಲಿ ‘ಸ್ಮೃತಿ ವನ’ ಮತ್ತು ಅಂಜರ್ ನಲ್ಲಿ ‘ವೀರ್ ಬಾಲಕ್ ಸ್ಮಾರಕ’ವನ್ನು ಅವರು ಬೃಹತ್ ಭೂಕಂಪದಲ್ಲಿ ಮಡಿದವರ ಸ್ಮರಣಾರ್ಥವಾಗಿ ಸಮರ್ಪಿಸಿದರು. ಈ ಎರಡು ಸ್ಮಾರಕಗಳು ಜಪಾನ್ ನ ಹಿರೋಷಿಮಾ ಮ್ಯೂಸಿಯಂನಂತೆ ಕಛ್ ಅನ್ನು ವಿಶ್ವ ಭೂಪಟದಲ್ಲಿ ಸೇರಿಸಲಿವೆ ಎಂದು ಅವರು ಹೇಳಿದರು.ಭೂಕಂಪ ಸಂಭವಿಸಿದಾಗ ತಾವು ದೆಹಲಿಯಲ್ಲಿದ್ದೆ ಎಂದು ಹೇಳಿದ ಪ್ರಧಾನಿ ಮೋದಿ, ಮರುದಿನವೇ ಗುಜರಾತ್ ಗೆ ಧಾವಿಸಿದರು.
ವಿಪತ್ತು ನಿರ್ವಹಣಾ ಕಾಯ್ದೆಯನ್ನು ಪರಿಚಯಿಸಿದ ಮೊದಲ ರಾಜ್ಯ ಗುಜರಾತ್ ಆಗಿದ್ದು, ಇದು ನಂತರ ರಾಷ್ಟ್ರದ ಇತರ ಭಾಗಗಳಿಗೆ ಸ್ಫೂರ್ತಿ ನೀಡಿತು ಎಂದು ಅವರು ಹೇಳಿದರು.