ಉದ್ಯಮಿ ಆನಂದ್ ಮಹೀಂದ್ರಾ(Anand Mahindra) ಅವರು ಸುಂದರವಾದ ಮರದ ಸುರಂಗದ ವೀಡಿಯೋವೊಂದನ್ನು ಶೇರ್ ಮಾಡಿದ್ದು, ಭಾರತದಾದ್ಯಂತ ನಿರ್ಮಿಸಲಾಗುತ್ತಿರುವ ಹೊಸ ಗ್ರಾಮೀಣ ರಸ್ತೆಗಳಲ್ಲಿ ಉದ್ದೇಶಪೂರ್ವಕವಾಗಿ ಈ ರೀತಿ ಮರಗಳನ್ನು ನೆಡುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.
I like tunnels, but frankly, I’d much rather go through this kind of ‘Trunnel’ …@nitin_gadkari ji, can we plan to purposefully plant some of these trunnels on the new rural roads you are building? https://t.co/6cE4njjGGi
— anand mahindra (@anandmahindra) August 27, 2022
ರಸ್ತೆಯ ಎರಡೂ ಬದಿಗಳಲ್ಲಿ ನೆಟ್ಟ ಮರಗಳಿಂದ ಕೂಡಿದ ಸುರಂಗವೊಂದನ್ನು ರೀ ಪೋಸ್ಟ್ ಮಾಡಿರುವ ಮಹೀಂದ್ರಾ, ʻನನಗೆ ಸುರಂಗ ಮಾರ್ಗಗಳು ಇಷ್ಟ. ಅದರಲ್ಲೂ ಈ ರೀತಿಯ ‘ಟ್ರನಲ್’ ಮೂಲಕ ಹೋಗಲು ಇಷ್ಟಪಡುತ್ತೇನೆ. ನಿತಿನ್ ಗಡ್ಕರಿಯವರೇ, ಭಾರತದಾದ್ಯಂತ ನಿರ್ಮಿಸಲಾಗುತ್ತಿರುವ ಹೊಸ ಗ್ರಾಮೀಣ ರಸ್ತೆಗಳಲ್ಲಿ ಉದ್ದೇಶಪೂರ್ವಕವಾಗಿ ಈ ರೀತಿ ಮರಗಳನ್ನು ನೆಡಲು ನಾವು ಯೋಜಿಸಬಹುದೇ?ʼ ಎಂದಿದ್ದಾರೆ.
ಹೀಗೆ ಬರೆಯುವಾಗ ಮಹೀಂದ್ರಾ ಅವರು ‘ಟ್ರನಲ್’ ಎಂಬ ಪದ ಬಳಸಿದ್ದಾರೆ. ‘ಟ್ರನಲ್’ ಎಂದರೆ, ಆಂಗ್ಲ ಭಾಷೆಯಲ್ಲಿ ಮರಗಳು ಮತ್ತು ಸುರಂಗ ಪದಗಳ ಸಂಯೋಜನೆಯಾಗಿದೆ.
BIGG NEWS : ಇಂದು ‘ಮನ್ ಕಿ ಬಾತ್’ನ 92ನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಮಾತುಕತೆ | Mann Ki Baat