ಬೆಂಗಳೂರು : ಮುರುಘಾಮಠದ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣದ ವಿಚಾರದ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ತನಿಖೆ ಬಳಿಕ ಸತ್ಯ ಹೊರಬಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘ ಶ್ರೀಗಳ ವಿರುದ್ಧ ಪೋಕ್ಸೋ ಮತ್ತು ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಎರಡೂ ಪ್ರಕರಣಗಳ ತನಿಖೆ ಮಾಡುತ್ತಿದ್ದಾರೆ. ತನಿಖೆ ದೃಷ್ಟಿಯಿಂದ ಈ ಮಾತನಾಡಲು ಆಗಲ್ಲ. ತನಿಖೆ ಬಳಿಕ ಸತ್ಯ ಹೊರಬಲಿದೆ ಎಂದು ಹೇಳಿದ್ದಾರೆ.
BIGG NEWS : ಇಂದು ‘ಮನ್ ಕಿ ಬಾತ್’ನ 92ನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಮಾತುಕತೆ | Mann Ki Baat
ಇನ್ನು ಮುರುಘಾಮಠದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ಇಬ್ಬರು ಬಾಲಕಿಯರು ಮೈಸೂರಿನಿಂದ ಚಿತ್ರದುರ್ಗಕ್ಕೆ ಶಿಫ್ಟ್ ಮಡಲಾಗಿದೆ. ಪೊಲೀಸರ ಭದ್ರತೆಯಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಇಬ್ಬರು ಬಾಲಕಿಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಶಿಫ್ಟ್ ಮಾಡಲಾಗಿದೆ. ಸದ್ಯ ಇಬ್ಬರು ಬಾಲಕಿಯರು ಬಾಲಭವನದಲ್ಲಿದ್ದಾರೆ. ಇಂದು ಜಡ್ಜ್ ಎದುರು ಹೇಳಿಕೆ ನೀಡುವ ಸಾಧ್ಯತೆ ಇದೆ. ನಂತರ ಬಾಲಕಿಯರಿಗೆ ಮೆಡಿಕಲ್ ಟೆಸ್ಟ್ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
BIGG NEWS : ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಭಾರೀ ಪ್ಲ್ಯಾನ್ : ಗಣೇಶ ಮೂರ್ತಿ ಕೂರಿಸಲು 3 ರೀತಿ ಪ್ರದೇಶಗಳ ಗುರುತು