ಡೆಹ್ರಾಡೂನ್(ಉತ್ತರಾಖಂಡ್):23 ವರ್ಷದ ಸೇನಾ ಆಕಾಂಕ್ಷಿಯೊಬ್ಬರು ʻಅಗ್ನಿವೀರ್(Agniveer)ʼ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡ್ನ ಪೌರಿ ಗಡ್ವಾಲ್ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ಸಾತ್ಪುಲಿ ನಿವಾಸಿ ಸುಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಕೋಟ್ವಾರ್ನಲ್ಲಿ ನಡೆದ ಅಗ್ನಿವೀರ್ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಹಿನ್ನೆಲೆಯಲ್ಲಿ ಸುಮಿತ್ ಅಸಮಾಧಾನಗೊಂಡಿದ್ದರು. ಬುಧವಾರ ಸಂಜೆ ಸುಮಿತ್ ನೌಗಾಂವ್ ಕಮಂದ ಗ್ರಾಮದಲ್ಲಿನ ಮನೆಗೆ ಮರಳಿದ್ದರು. ಗುರುವಾರ ಬೆಳಗ್ಗೆ 6.45ಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸುಮಿತ್ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಸುಮಿತ್ ಕಳೆದ ನಾಲ್ಕು ವರ್ಷಗಳಿಂದ ಸೇನಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಸುಮಿತ್ ಬುಧವಾರ ಪರೀಕ್ಷೆಗೆ ಹಾಜರಾಗಲು ಹೋಗಿದ್ದರು. ಆದರೆ, ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದರು. ಇದರಿಂದ ಅಸಮಧಾನಗೊಂಡಿದ್ದ ಸುಮಿತ್ ಸಾವಿಗೆ ಶರಣಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಿಕಾ ವಿತರಕರ ಗಣೇಶ್ ಸಾವು: ಕೆಯುಡಬ್ಲ್ಯೂಜೆ ಮನವಿಗೆ ಸ್ಪಂದಿಸಿ 2 ಲಕ್ಷ ರೂ ಬಿಡುಗಡೆಗೆ ಕಾರ್ಮಿಕ ಸಚಿವ ಆದೇಶ
BIG NEWS: ತೆಲಂಗಾಣ ಕಾಂಗ್ರೆಸ್ ನಾಯಕ ʻಎಂಎ ಖಾನ್ʼ ಪಕ್ಷಕ್ಕೆ ರಾಜೀನಾಮೆ: ಕಾರಣ ಇಷ್ಟೇ…?